ಬೀದರ್: ‘ಹುಮನಾಬಾದ್ ತಾಲ್ಲೂಕಿನ ಗ್ರಾಮವೊಂದರ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದ ನಡೆದ ಲೈಂಗಿಕ ದೌರ್ಜನದ ಪ್ರಕರಣ ಎಸ್ಐಟಿಗೆ ವಹಿಸಬೇಕು’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರೋಪಿ ಶಿಕ್ಷಕ ಬೇರೆ ಬೇರೆ ವಿದ್ಯಾರ್ಥಿನಿಯರಿಗೂ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಗಳು ಇವೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಆರೋಪಿಯನ್ನು ರಕ್ಷಣೆ ಮಾಡದೆ ಕಠಿಣ ಕ್ರಮಕೈಗೊಳ್ಳಬೇಕು. ಶಿಕ್ಷಕನ ಹಿಂದೆ ಯಾರ್ಯಾರು ಇದ್ದಾರೆ ಎಂಬುದರ ಕುರಿತು ಸಮಗ್ರ ತನಿಖೆಯಾಗಬೇಕು’ ಎಂದು ಆಗ್ರಹಿಸಿದರು.

‘ಇದೊಂದು ಲವ್ ಜಿಹಾದ್ ಅಲ್ಲ. ಬದಲಾಗಿ ಇದು ಬಲಾತ್ಕಾರದ ಜಿಹಾದ್ ಆಗಿದೆ. ರಾಜ್ಯದಲ್ಲಿ ಗಲಭೆಗಳು ನಡೆಯುತ್ತಿದ್ದರೂ ಸರ್ಕಾರ ಆರೋಪಿಗಳನ್ನು ರಕ್ಷಣೆ ಮಾಡುತ್ತಿದೆ. ಆರೋಪಿಗಳು ಕೂಡ ನಮ್ಮ ಹಿಂದೆ ಸಿಎಂ ಇದ್ದಾರೆ. ಏನಾದರೂ ಅಪರಾಧ ಮಾಡಿದರೆ ಕ್ಯಾಬಿನೆಟ್ನಲ್ಲಿ ನಮ್ಮ ಮೇಲಿನ ಕೇಸ್ ವಾಪಸ್ ಪಡೆಯುತ್ತಾರೆ ಎನ್ನುವ ಧೈರ್ಯ ಅವರಲ್ಲಿ ಇದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಸಿದ್ದಲಿಂಗಪ್ಪ ಪಾಟೀಲ ಮಾತನಾಡಿ, ‘ನಮ್ಮ ತಾಲ್ಲೂಕಿನಲ್ಲಿ ಇಂತಹ ಪ್ರಕರಣ ನಡೆದರೂ ತನಿಖೆ ಕುರಿತು ಪೊಲೀಸರು ನಮಗೆ ಏನೂ ತಿಳಿಸುತ್ತಿಲ್ಲ. ತಾಲ್ಲೂಕಿನಲ್ಲಿ ಅಧಿಕಾರಿಗಳು ಸರಿಯಿಲ್ಲ. ಪೊಲೀಸ್ ಇಲಾಖೆ ಈ ಪ್ರಕರಣ ಗಂಭೀರವಾಗಿ ತೆಗೆದುಕೊಂಡು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಹಾಗೂ ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ‘ಮುಖ್ಯಮಂತ್ರಿಗಳು ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಘಟನೆ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸಬೇಕು’ ಎಂದರು.

ಶಾಸಕ ಶರಣು ಸಲಗರ ಮಾತನಾಡಿ, ‘ಆರೋಪಿಯು ಮಾತನಾಡಿದ್ದಾನೆ ಎನ್ನುವ ಆಡಿಯೋ ಬಿಡುಗಡೆಯಾಗಿದೆ. ನಾನೇ ನಾಲ್ಕು ಜನ ಹುಡುಗಿಯರನ್ನು ಲಾಡ್ಜ್ಗೆ ಕರೆದುಕೊಂಡು ಹೋಗಿದ್ದೇನೆ ಎಂದು ಹೇಳಿದರೂ ತನಿಖೆಯಾಗುವುದಿಲ್ಲ. ಹೀಗಾಗಿ ಸಿಎಂ ಮತ್ತು ಗೃಹ ಸಚಿವರು ಶಾಲೆಗೆ ಭೇಟಿ ನೀಡಿ ಸಂತ್ರಸ್ತ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಿ ಕೊಡಬೇಕು. ಧರ್ಮಸ್ಥಳದಂತಹ ಸಣ್ಣ ವಿಷಯಕ್ಕೆ ಎಸ್ಐಟಿ ತನಿಖೆ ಮಾಡಿಸುವ ಸರ್ಕಾರ ಇಂತಹ ದೊಡ್ಡ ಬಲಾತ್ಕಾರ ಪ್ರಕರಣ ಜರುಗಿದೆ. ಇದನ್ನೂ ಎಸ್ಐಟಿ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಈಶ್ವರಸಿಂಗ್ ಠಾಕೂರ, ದಿಗಂಬರರಾವ ಮಾನಕಾರಿ, ರಾಜಶೇಖರ ನಾಗಮೂರ್ತಿ, ಬಸವರಾಜ ಪವಾರ, ಶಿವು ಲೋಖಂಡೆ, ಮಾಧವ ಹಸೂರೆ, ಕಿರಣ ಪಾಟೀಲ, ಲುಂಬಿಣಿ ಗೌತಮ, ಶ್ರೀನಿವಾಸ ಚೌಧರಿ ಸೇರಿದಂತೆ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.