ಶನಿವಾರ, ಮೇ 15, 2021
25 °C
ಉಪ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ವಾಗ್ದಾಳಿ

ಬಿಜೆಪಿಗೆ ಸೇರ್ಪಡೆ ಆಗುತ್ತಿರುವವರೂ ಹೊರಗಿನವರೇ: ಮಲ್ಲಿಕಾರ್ಜುನ ಖೂಬಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ‘ಬಿಜೆಪಿ ಅಭ್ಯರ್ಥಿ ಶರಣು ಸಲಗರ, ಇಲ್ಲಿ ನಡೆದ ಸಭೆಗಳಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ಪ್ರಕಾಶ ಖಂಡ್ರೆ, ಸಿದ್ದು ಪಾಟೀಲ ಇವರು ಹೊರಗಿನವರೇ ಆಗಿದ್ದಾರೆ. ಅಷ್ಟೇ ಅಲ್ಲ; ಇದುವರೆಗೆ ನಡೆದ ಸೇರ್ಪಡೆ ಕಾರ್ಯಕ್ರಮಗಳಲ್ಲಿ ಘಾಟಬೋರಾಳ, ಹುಮನಾಬಾದ್, ಕಲಬುರ್ಗಿಯ ಕಾರ್ಯಕರ್ತರೇ ಪಾಲ್ಗೊಂಡಿದ್ದರು. ಸ್ಥಳೀಯ ಕಾರ್ಯಕರ್ತರೇ ಆ ಪಕ್ಷದಲ್ಲಿಲ್ಲ’ ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ವಾಗ್ದಾಳಿ ನಡೆಸಿದರು.

ಇಲ್ಲಿ ಭಾನುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ‘ಬಿಜೆಪಿಗೆ ಎಲ್ಲರೂ ಹೊರಗಿನವರೇ ಬೇಕು. ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ನಾಮನಿರ್ದೇಶಿತ ಸದಸ್ಯರನ್ನಾಗಿಯೂ ಔರಾದ್‌ನ ಕಿರಣ ಪಾಟೀಲ ಎನ್ನುವ ವರನ್ನು ನೇಮಿಸಲಾಗಿದೆ. ಇಲ್ಲಿ ಬಸವ ಭಕ್ತರೇ ಇರಲಿಲ್ಲವೇ? ನನಗೆ 2 ಸಾವಿರ ಮತ ದೊರಕುವುದಿಲ್ಲ ಎಂದು ಭಗವಂತ ಖೂಬಾ ಸಭೆಗಳಲ್ಲಿ ಹೇಳುತ್ತಿದ್ದಾರೆ. ಚುನಾವಣೆಯಲ್ಲಿ ಎಷ್ಟು ಮತ ಬರುತ್ತವೆ ಎಂದು ಜನ ತೋರಿಸುವರು’ ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು