ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ನೂರು ಜನ ನಿರ್ಗತಿಕರಿಗೆ ಕಂಬಳಿ ವಿತರಣೆ

Published 18 ಡಿಸೆಂಬರ್ 2023, 15:31 IST
Last Updated 18 ಡಿಸೆಂಬರ್ 2023, 15:31 IST
ಅಕ್ಷರ ಗಾತ್ರ

ಬೀದರ್‌: ‘ರೋಟರಿ ಕ್ಲಬ್‌ ಆಫ್‌ ಬೀದರ್‌ ಸಿಲ್ವರ್‌ ಸ್ಟಾರ್‌’ನಿಂದ ನಗರದಲ್ಲಿ ನೂರು ಜನ ನಿರ್ಗತಿಕರಿಗೆ ಭಾನುವಾರ ಕಂಬಳಿ ವಿತರಿಸಲಾಯಿತು.

ಚಳಿ ಹೆಚ್ಚಿರುವುದರಿಂದ ನಗರದ ರೈಲು ನಿಲ್ದಾಣ, ಬಸ್‌ ನಿಲ್ದಾಣ, ಗಾಂಧಿ ಗಂಜ್‌ ಸೇರಿದಂತೆ ಇತರೆ ಕಡೆಗಳಲ್ಲಿ ರಸ್ತೆ ಬದಿ ಮಲಗಿದ್ದ ನಿರ್ಗತಿಕರಿಗೆ ಕಂಬಳಿಯನ್ನು ರೋಟರಿ ಸದಸ್ಯರು ವಿತರಿಸಿದರು. ಡಾ. ನಿಶಾ ಕೌರ್‌ ಅವರು ರೋಟರಿ ಕ್ಲಬ್‌ಗೆ ಕಂಬಳಿಗಳನ್ನು ದಾನದ ರೂಪದಲ್ಲಿ ನೀಡಿದ್ದರು.

ಕ್ಲಬ್ ಸಲಹೆಗಾರ ಬಸವರಾಜ ಧನ್ನೂರ, ‘ಚಾರ್ಟರ್’ ಅಧ್ಯಕ್ಷ ಸರ್ದಾರ್‌ ಪುನೀತ್‌ ಸಿಂಗ್, ಉಪಾಧ್ಯಕ್ಷ ಆದೀಶ ವಾಲಿ, ಕಾರ್ಯದರ್ಶಿ ಪೂಜಾ ಜಾರ್ಜ್ ಸ್ಯಾಮುವೆಲ್, ಜಂಟಿ ಕಾರ್ಯದರ್ಶಿ ಸ್ಫೂರ್ತಿ ಧನ್ನೂರ, ಖಜಾಂಚಿ ಅಮೆ ಸಿಂದೋಲ್, ಡಾ. ಸಂಗಮೇಶ ವಡಗಾಂವೆ, ನಿರ್ದೇಶಕ ಮಂಜುನಾಥ ಹೂಗಾರ, ಕೀರ್ತಿ ವಾಲೆ, ಸದಸ್ಯ ಸಾಗರ ಬುಟ್ಟೆ, ಸುರೇಂದ್ರ ಸಿಂದೋಲ್, ಸಮೃದ್ಧ ಚಂದಾ, ಕಿರಣ ಸ್ಯಾಮುವೆಲ್, ಆನಂದ ಕೊಟರಕಿ, ಮಹೇಶ ಚಿಮಕೋಡೆ, ಕೃಷ್ಣ ಪಸರಗೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT