ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಮನಾಬಾದ್: ಜಾತ್ರೆಯಲ್ಲಿ ಪಶು ಪ್ರದರ್ಶನ

Published 12 ಮೇ 2024, 15:49 IST
Last Updated 12 ಮೇ 2024, 15:49 IST
ಅಕ್ಷರ ಗಾತ್ರ

ಹುಮನಾಬಾದ್: ‘ಕರಿ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಶು ಪ್ರದರ್ಶನ ಆಯೋಜನೆ ಮಾಡಿರುವುದು ಶ್ಲಾಘನೀಯ’ ಎಂದು ಹುಡಗಿ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಶಾಂತವೀರ ಸಿದ್ದೇಶ್ವರ ತಿಳಿಸಿದರು.

ತಾಲ್ಲೂಕಿನ ಹುಡಗಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಪಶು ಪ್ರದರ್ಶನದಲ್ಲಿ ಮಾತನಾಡಿದರು.

ತಾಲ್ಲೂಕಿನಲ್ಲಿ ಎಲ್ಲಿಯೂ ಈ ರೀತಿಯಾಗಿ ಪಶು ಪ್ರದರ್ಶನ ಆಗುವುದಿಲ್ಲ. ಆದರೆ ಹುಡಗಿ ಹಿರೇಮಠ ಸಂಸ್ಥಾನದಿಂದ ವಿಶೇಷವಾಗಿ ಜಾತ್ರಾ ಮಹೋತ್ಸವದಲ್ಲಿ ಪಶು ಪ್ರದರ್ಶನ ಮಾಡಿ ರೈತರಿಗೆ ಬಹುಮಾನ ವಿತರಣೆ ಮಾಡಿ ಹುಮ್ಮಸ್ಸು ತುಂಬುತ್ತಿರುವುದು ಸಂತಸ ತಂದಿದೆ ಎಂದರು.

ಪಶು ಪ್ರದರ್ಶನದಲ್ಲಿ ಹುಡಗಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ರೈತರು ತಮ್ಮಲ್ಲಿರುವ ಪಶುಗಳಿಗೆ ಸಿಂಗಾರ ಮಾಡಿ ಜಾತ್ರಾ ಮಹೋತ್ಸವದಲ್ಲಿ ಪ್ರದರ್ಶನ ಮಾಡಿ ನೋಡುಗರ ಗಮನ ಸೆಳೆಯುವಂತೆ ಮಾಡಿದ್ದರು.

ಸುಮಾರು 150ಕ್ಕೂ ಅಧಿಕ ಪಶುಗಳ ಪ್ರದರ್ಶನ ಜರುಗಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬವ್ವ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ನರಸಪ್ಪ , ಡಾ.ಗೋವಿಂದ್, ಗುರುಲಿಂಗಪ್ಪ ಮೇಲದೋಡ್ಡಿ, ಡಾ.ಶಾಂತವೀರ ಗೋಪ, ಡಾ.ಗಣಾಧಿಶ್ವರ ಹಿರೇಮಠ, ಡಾ.ಶಶಿಧರ್, ಯೋಗೇಂದ್ರ , ಸಂಜು ಪಾಟೀಲ, ನೀಲಕಂಠ, ಸಂತೋಷ, ವಿಠ್ಠಲ್ , ಸಂಗಮೇಶ, ಶ್ವೇತಾರಾಣಿ, ಶಿಲ್ಪಾ, ಸುನೀಲ, ಶಿವಕುಮಾರ ಸಲಗಾರ, ಜಮೀರ್, ರವೀಂದ್ರಯ್ಯ, ಅನಿಲ್ ನಂದಿ, ವಿನಾಯಕ ರುದನೂರ್, ನಾಗರಾಜ, ರಾಜು, ಅಮರ, ಲಿಂಗರಾಜ, ಗೌರಿಶಂಕರ ಪರ್ತಾಪುರೆ, ಹಣಮಂತ ಸೇರಿ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT