ಬಸವಕಲ್ಯಾಣ: ತಾಲ್ಲೂಕಿನ ಶಿರಗಾಪುರದಲ್ಲಿ ಭಾನುವಾರ ಹಾರಕೂಡ ಚನ್ನವೀರ ಶಿವಾಚಾರ್ಯರ 63ನೇ ಜನ್ಮದಿನಾಚರಣೆ ನಿಮಿತ್ತ ಅಡ್ಡಪಲ್ಲಕ್ಕಿ ಮೆರವಣಿಗೆಯನ್ನು ಅದ್ದೂರಿಯಾಗಿ ನೆರವೇರಿಸಲಾಯಿತು. ಪುಷ್ಪಗಳಿಂದ ಸಿಂಗರಿಸಲಾಗಿದ್ದ ವಾಹನದ ಮೇಲೆ ಅಡ್ಡಪಲ್ಲಕ್ಕಿಯನ್ನು ಇರಿಸಲಾಗಿತ್ತು.

ಮಹಿಳೆಯರು ಕುಂಭ ಕಲಶಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ವಾದ್ಯ ಮೇಳದವರು, ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ತಂದವು. ಬಳಿಕ ವೇದಿಕೆಯಲ್ಲಿ ಪ್ರೊ.ಜಿ.ಎಸ್.ಮಾಲಿಪಾಟೀಲ ಪರಿವಾರದವರಿಂದ ಒಂದು ಕೆಜಿಯ ಬೆಳ್ಳಿ ಕಿರೀಟವನ್ನು ಚನ್ನವೀರ ಶಿವಾಚಾರ್ಯ ಅವರಿಗೆ ತೊಡಿಸಲಾಯಿತು. ಅನೇಕ ಭಕ್ತರು, ಗಣ್ಯರು ಪುಷ್ಪಮಾಲೆ ಅರ್ಪಿಸಿ, ಕಾಣಿಕೆ ನೀಡಿ ದರ್ಶನ ಪಡೆದರು.

ಶಾಸಕ ಶರಣು ಸಲಗರ ಮಾತನಾಡಿ, ‘ಹಾರಕೂಡ ಮಠಕ್ಕೆ ಶ್ರದ್ಧೆ, ಭಕ್ತಿಯಿಂದ ನಡೆದುಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತದೆ. ನಾನು ಶಿವಾಚಾರ್ಯರ ಆಶೀರ್ವಾದದಿಂದಲೇ ಎರಡು ಬಾರಿ ಶಾಸಕನಾಗಿದ್ದೇನೆ. ಆದ್ದರಿಂದ ವಿಧಾನಸಭೆಯಲ್ಲಿ ಅವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇನೆ’ ಎಂದು ಹೇಳಿದರು.

ಚನ್ನವೀರ ಶಿವಾಚಾರ್ಯರು ಮಾತನಾಡಿ, ‘ನಿಸ್ವಾರ್ಥ ಭಾವನೆಯವರಿಗೆ ದೇವರು ಒಲಿಯುತ್ತಾನೆ. ಹೆಣ್ಣು, ಹೊನ್ನು, ಮಣ್ಣಿಗಾಗಿ ಜಗಳಗಳು ನಡೆಯುತ್ತವೆ. ಆದರೆ ಅವು ಶಾಶ್ವತವಲ್ಲ’ ಎಂದು ಹೇಳಿದರು.

ಸಂಸದರಾದ ಡಾ.ಉಮೇಶ ಜಾಧವ, ಸಾಗರ ಖಂಡ್ರೆ, ಹುಮನಾಬಾದ್ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ಖೇಳಗಿ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು.

ಶಾಸಕರಾದ ಬಿ.ಆರ್. ಪಾಟೀಲ, ಕಾಡಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಹೊನ್ನಾನಾಯಕ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜಕುಮಾರ ಬಿರಾದಾರ ಶಿರಗಾಪುರ, ಜಗನ್ನಾಥ ಪಾಟೀಲ ಮಂಠಾಳ, ಶೋಭಾವತಿ ವೈಜನಾಥ ಮೂಲಗೆ, ಸಾವಿತ್ರಿ ರಾಜಕುಮಾರ ಯಾಚೆ, ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ, ಬಿ.ಕೆ. ಹಿರೇಮಠ, ಮಲ್ಲಿನಾಥ ಹಿರೇಮಠ, ಶಿವಕುಮಾರ ಜಡಗೆ, ನವಲಿಂಗ ಪಾಟೀಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.