ಬೀದರ್: ಗಾಂಧಿ ಜಯಂತಿ ಪ್ರಯುಕ್ತ ಸಮಾಜ ಕಲ್ಯಾಣ ಇಲಾಖೆಯ ಅಧೀನದ ನೌಬಾದ್ನ ಮೆಟ್ರಿಕ್ ನಂತರದ ಬಾಲಕಿಯರ ವಸತಿ (ಹೊಸ) ನಿಲಯದ ವಿದ್ಯಾರ್ಥಿನಿಯರು ಸ್ವಚ್ಛತಾ ಶ್ರಮದಾನ ಮಾಡಿದರು.

ಕೈಯಲ್ಲಿ ಪೊರಕೆ ಹಿಡಿದು ಕಟ್ಟಡದ ಒಳಗಿನ ಹಾಗೂ ಹೊರಗಿನ ಆವರಣ ಶುಚಿಗೊಳಿಸಿದರು. ಕಸ, ಕಡ್ಡಿಗಳನ್ನು ಆಯ್ದು ಸ್ಥಳಾಂತರ ಮಾಡಿದರು.

ವಿದ್ಯಾರ್ಥಿಗಳು ಮಹಾತ್ಮ ಗಾಂಧಿ ಅವರ ಸತ್ಯ, ಅಹಿಂಸಾ ತತ್ವಗಳನ್ನು ಪಾಲಿಸಬೇಕು ಎಂದು ಸ್ವಚ್ಛತಾ ಶ್ರಮದಾನಕ್ಕೆ ಚಾಲನೆ ನೀಡಿದ ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕ ಅನಿಲಕುಮಾರ ಮೇಲ್ದೊಡ್ಡಿ ಹೇಳಿದರು.

ಗಾಂಧಿ ಅವರ ಕನಸಿನ ಸ್ವಚ್ಛ, ಸ್ವಸ್ಥ ಹಾಗೂ ಸುಂದರ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.

ಕಚೇರಿ ವ್ಯವಸ್ಥಾಪಕ ರಮೇಶ ಗೋಖಲೆ, ವಾರ್ಡನ್ ಶೀಲಾ ವಾಡೇಕರ್, ವಿದ್ಯಾರ್ಥಿನಿಯರಾದ ಉಷಾ, ಶಿವರಾಜ, ಜಗದೇವಿ ಶರಣಪ್ಪ, ಕಾವೇರಿ ಭೀಮರಾವ್, ಆರತಿ ಬಾಬುರಾವ್, ವಿಜಯಲಕ್ಷ್ಮಿ, ದಯಾನಂದ, ಉಷಾ ಗಾಂಧಿ, ಸುಮಾ ಪಾಂಡುರಂಗ ಇದ್ದರು.

ಗಾಂಧಿ ಜಯಂತಿ ಆಚರಣೆ: ನಗರದ ಪ್ರತಾಪನಗರದ ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕರ ಕಚೇರಿ ಮಹಾತ್ಮ ಗಾಂಧಿ ಜಯಂತಿ ಆಚರಿಸಲಾಯಿತು.

ತಾಲ್ಲೂಕು ಸಹಾಯಕ ನಿರ್ದೇಶಕ ಅನಿಲಕುಮಾರ ಮೇಲ್ದೊಡ್ಡಿ ಅವರು ಮಹಾತ್ಮ ಗಾಂಧಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ವ್ಯವಸ್ಥಾಪಕ ರಮೇಶ ಗೋಖಲೆ, ಪ್ರಥಮ ದರ್ಜೆ ಸಹಾಯಕಿ ಮಹಾದೇವಿ, ದ್ವಿತೀಯ ದರ್ಜೆ ಸಹಾಯಕ ರತನಸಿಂಗ್, ಬೆರಳಚ್ಚುಗಾರ್ತಿ ಅನಿತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.