ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯ ಮೌಲ್ಯಗಳು ನೆಲೆಗೊಳ್ಳಲು ಬೇಕು ಸಹಕಾರ 

ಜಮಾ ಅತೆ ಇಸ್ಲಾಮಿ ಹಿಂದ್‍ನ ಮುಹಮ್ಮದ್ ಕುಂಇ ಹೇಳಿಕೆ
Last Updated 9 ಅಕ್ಟೋಬರ್ 2022, 15:31 IST
ಅಕ್ಷರ ಗಾತ್ರ

ಬೀದರ್: ‘ಸ್ವಸ್ಥ ಸಮಾಜ ನಿರ್ಮಾಣಕ್ಕೆ ಆರೋಗ್ಯಪೂರ್ಣ ಮನಸ್ಸುಗಳು ಇರಬೇಕು. ಮಾನವೀಯ ಮೌಲ್ಯಗಳು ನೆಲೆಗೊಳ್ಳಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಜಮಾ ಅತೆ ಇಸ್ಲಾಮಿ ಹಿಂದ್‍ನ ಕರ್ನಾಟಕ ಘಟಕದ ಕಾರ್ಯದರ್ಶಿ ಮೌಲಾನಾ ಮುಹಮ್ಮದ್ ಕುಂಇ ಹೇಳಿದರು.

ಜಮಾ ಅತೆ ಇಸ್ಲಾಮಿ ಹಿಂದ್ ಸಂಘಟನೆ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ಪ್ರವಾದಿ ಮಹಮ್ಮದರನ್ನು ಅರಿಯೋಣ' ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಎಲ್ಲರೂ ಸೇವಿಸುವ ಗಾಳಿ, ನೀರು, ನೆಲೆಸಿರುವ ನೆಲ ಒಂದೇ ಆಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ತಾರತಮ್ಯ, ಜಾತಿ, ಮತ, ಧರ್ಮಗಳ ಹೆಸರಿನಲ್ಲಿ ಕಿತ್ತಾಟ ನಡೆದಿದೆ. ಹಗೆತನ, ದ್ವೇಷ, ಅಸೂಯೆ ಎಂದಿಗೂ ಯಾರಿಗೂ ಒಳ್ಳೆಯದಲ್ಲ. ಇಲ್ಲಿ ಎಲ್ಲರೂ ಮನುಷ್ಯರು ಎನ್ನುವುದನ್ನು ಅರ್ಥ ಮಾಡಿ ಕೊಂಡಾಗ ಮಾತ್ರ ಪರಿಪೂರ್ಣ ಸಮಾಜ ನಿರ್ಮಾಣ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಮನುಕುಲ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಪ್ರವಾದಿಗಳು ಆರನೆಯ ಶತಮಾನದಲ್ಲಿಯೇ ಪರಿಹಾರ ಸೂಚಿಸಿದ್ದಾರೆ. ಇಂದಿನ ಶಿಕ್ಷಿತ ಸಮಾಜ ಅವರ ಸಂದೇಶಗಳ ವೈಜ್ಞಾನಿಕ-ತಾರ್ಕಿಕ ಅಧ್ಯಯನ ನಡೆಸುವ ಅವಶ್ಯಕತೆ ಇದೆ’ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಶಾಸಕ ರಹೀಂ ಖಾನ್‌, ರಾಬ್ತಾ–ಎ–ಮಿಲ್ಲತ್‌ ಅಧ್ಯಕ್ಷ ಅಬ್ದುಲ್‌ ಖದೀರ್, ಸೇಂಟ್‌ ಜೋಸೆಫ್‌ ಚರ್ಚ್‌ನ ಫಾದರ್‌ ವಿಲ್ಸನ್‌ ಫರ್ನಾಂಡೀಸ್, ಅಹ್ಲ್‌ಎ ಸುನ್ನತ್‌ ವುಲ್‌ ಜಮಾಅತ್ ರಾಜ್ಯ ಉಪಾಧ್ಯಕ್ಷ ಮೌಲಾನಾ ಸೈಯದ್‌ ಸಿರಾಜುದ್ದಿನ್‌ ನಿಝಾಮಿ, ಮಸ್ಜಿದ್‌–ಎ–ಮಹಮೂದ್‌ ಗವಾನ್‌ದ ಮೌಲಾನಾ ಅಬ್ದುಲ್‌ ವಹೀದ್‌ ಕಾಸ್ಮಿ, ಪ್ರಧಾನ ಖಾಜಿ ಸೈಯದ್‌ ಹುಸಾಮುದ್ದಿನ್ ಉಝೇರ್‌, ಅಬುಲ್‌ ಬಯಾನ್, ಶಿವರಾಜ್ ಪಾಟೀಲ, ಮನ್ಸೂರ್‌ ಖಾದ್ರಿ, ನಜಮುದ್ದಿನ್ ಹುಸೇನ್‌ ಉಮ್ರಿ, ಮೌಲಾನಾ ಅಬ್ದುಲ್‌ ಗಣಿಖಾನ್, ಮೌಲಾನಾ ಮಹಮ್ಮದ್ ಅಯೂಬ್ ಸಲೀಂ, ಮಹಮ್ಮದ್‌ ಅಸಿಫೊದ್ದಿನ್, ಮಹಮ್ಮದ್ ಅಕ್ರಮ ಅಲಿ, ತೌಹೀದ್‌ ಸಿಂಧೆ, ನಸೀಮುನ್ನಿಸಾ ಬೇಗಂ, ಹರಮೈನ್‌ ಷರ್‌ಪೈನ್, ಮಹಮ್ಮದ್ ಜವ್ವಾದ್, ರಫಿಕ್‌ ಅಹ್ಮದ್, ಶೇಷರಾವ್ ಬೆಳಕುಣಕರ್, ಜಿ.ಎಂ.ಕುದುರೆ, ಸಂಜಯ ಜಾಗೀರದಾದ್, ಡಾ.ಸಿ.ಆನಂದರಾವ್, ಮೌಲಾನಾ ಮಹಮ್ಮದ್ ಮೋನಿಸ್‌ ಕಿರ್ಮಾನಿ, ಶೇಖ ಮುಜಿಬುರ್‌ರೆಹಮಾನ್‌ ಕಾಸ್ಮಿ, ಜಿಲ್ಲಾ ಘಟಕ ಅಧ್ಯಕ್ಷ ಸೈಯದ್ ಅಬ್ದುಲ್ ಸತ್ತಾರ್ ಇದ್ದರು.


ಸದ್ಭಾವನಾ ಮಂಚ್ ಸಂಚಾಲಕ ಗುರುನಾಥ ಗಡ್ಡೆ, ಸಾಹಿತಿಗಳಾದ ಸುನೀತಾ ಗೌಡರ, ಸಂಜೀವ ಅತಿವಾಳೆ, ನಿವೃತ್ತ ಪ್ರಾಚಾರ್ಯ ವಿಠ್ಠಲ್‌ದಾಸ್ ಪ್ಯಾಗೆ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ನಿವೃತ್ತ ಪ್ರಾಚಾರ್ಯ ಮುಹಮ್ಮದ್ ನಿಜಾಮುದ್ದಿನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT