ಭಾಲ್ಕಿ: ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ವಿದ್ಯಾರ್ಥಿಗಳು ಪದವಿ ಪ್ರಥಮ ವರ್ಷದಿಂದಲೇ ಉತ್ತಮ ತಯಾರಿ ನಡೆಸುವುದು ಅತ್ಯಗತ್ಯ ಎಂದು ಹುಮನಾಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ವೀರಣ್ಣ ತುಪ್ಪದ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ವಿವಿಧ ಕೋರ್ಸ್ನ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಾಧನೆಗೆ ಬೇಕಾಗಿರುವುದು ನಿರಂತರ ಪ್ರಯತ್ನ, ಸತತ ಅಧ್ಯಯನ, ಗುರುಗಳ ಮಾರ್ಗದರ್ಶನ ಎಂದರು.

ಕಾಲೇಜಿನ ಪ್ರಾಚಾರ್ಯ ಹೇಮಾವತಿ ಪಾಟೀಲ ಮಾತನಾಡಿ, ಶೈಕ್ಷಣಿಕ ಪ್ರಗತಿಯೊಂದಿಗೆ ವಿದ್ಯಾರ್ಥಿಗಳು ಸುಸಂಸ್ಕೃತಿ ಬೆಳೆಸಿಕೊಳ್ಳಬೇಕು. ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳೆಲ್ಲರೂ ಕಾಲೇಜಿನಲ್ಲಿ ದೊರೆಯುವ ಉತ್ತಮವಾದ ಸೌಲಭ್ಯಗಳು ಹಾಗೂ ಹಿರಿಯ ಪ್ರಾಧ್ಯಾಪಕರ ಸೇವೆಯನ್ನು ಸಂಪೂರ್ಣವಾಗಿ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಶ್ರೀದೇವಿ ಕಟ್ಟಿಮನಿ, ಸಂಪತ್ ಕುಮಾರಿ, ರವಿ ಮೇಟಿ ಮಾತನಾಡಿದರು.

ಪ್ರಮುಖರಾದ ನಾಗಮ್ಮ ಬಂಗರಗಿ, ನಾಗೇಂದ್ರಪ್ಪ, ಕೃಷ್ಣಮೂರ್ತಿ ಸೋಮನಾಥ, ಪ್ರದೀಪ, ಅಶೋಕ, ಶ್ರೀಕಾಂತ, ಧೋಂಡಿಬಾ, ವಿಜಯಕುಮಾರ, ರಮೇಶ, ಸೋಮನಾಥ, ವನಿತಾ ಬಾಂಗೆ, ಸಪ್ನಾ, ಸಂಗೀತಾ ಡೋಣೆ, ಜೈಶ್ರೀ, ದಿವ್ಯಜ್ಯೋತಿ ಸೇರಿದಂತೆ ಇತರರು ಇದ್ದರು.

ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರ ಮನ ರಂಜಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.