ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಕ್ಕೊಂದು ಪಂಚಾಯಿತಿ ರಚಿಸಿ: ಕಿಶನ್‌ರಾವ್

Last Updated 6 ಮೇ 2022, 15:36 IST
ಅಕ್ಷರ ಗಾತ್ರ

ಬೀದರ್: ‘ಗ್ರಾಮಗಳ ಸಮಗ್ರ ವಿಕಾಸಕ್ಕಾಗಿ ಗ್ರಾಮಕ್ಕೊಂದು ಪಂಚಾಯಿತಿ ರಚಿಸಬೇಕು’ ಎಂದು ಹಿರಿಯ ವಕೀಲ ಕಿಶನರಾವ್ ಸಾಯಗಾಂವಕರ್ ಒತ್ತಾಯಿಸಿದ್ದಾರೆ.

ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ. ಹೀಗಾಗಿ ಅಧಿಕಾರದ ವಿಕೇಂದ್ರೀಕರಣ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಅನೇಕ ಗ್ರಾಮ ಗಳನ್ನು ಸೇರಿಸಿ ಗ್ರಾಮ ಪಂಚಾಯಿತಿಗಳನ್ನು ರಚಿಸಿರುವುದರಿಂದ ಅಧಿಕಾರದ ಕೇಂ ದ್ರೀಕರಣ ವಾಗಿದೆ. ಜನರಿಗೆ ಅವರ ಹಕ್ಕುಗಳು ದೊರಕುತ್ತಿಲ್ಲ ಎಂದು ಹೇಳಿದ್ದಾರೆ.

ವಿವಿಧ ಗ್ರಾಮಗಳ ಜನ ಖಾತಾ, ಮನೆ ಕರ, ನಲ್ಲಿ ಕರ ಪಾವತಿ, ಜನನ, ಮರಣ ಪ್ರಮಾಣ ಪತ್ರ, ರಹವಾಸಿ ಪ್ರಮಾಣ ಪತ್ರ ಮೊದಲಾದ ಕೆಲಸಗಳಿಗೆ ಪಂಚಾಯಿತಿ ಕೇಂದ್ರ ಸ್ಥಾನಕ್ಕೆ ಹೋಗಬೇಕಾಗಿದೆ ಎಂದು ತಿಳಿಸಿದ್ದಾರೆ.

ಗ್ರಾಮಕ್ಕೊಂದು ಪಂಚಾಯಿತಿ ರಚಿಸಿದರೆ ಆಯಾ ಗ್ರಾಮಗಳ ಜನ ವಿವಿಧ ಕೆಲಸಗಳಿಗಾಗಿ ಬೇರೆ ಗ್ರಾಮಕ್ಕೆ ಹೋಗುವುದು ತಪ್ಪಲಿದೆ. ಗ್ರಾಮಗಳ ಸರ್ವಾಂಗೀಣ ಪ್ರಗತಿಯೂ ಆಗಲಿದೆ. ಪಂಚಾಯಿತಿ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಹೋಗಲು ಪಿಡಿಒ ಬದಲು ಕಾರ್ಯದರ್ಶಿ ಇದ್ದರೆ ಸಾಕು ಎಂದು ಹೇಳಿದ್ದಾರೆ. ಗ್ರಾಮಕ್ಕೊಂದು ಪಂಚಾಯಿತಿ ರಚಿಸಲು ಕರ್ನಾಟಕ ಪಂಚಾಯತ್‍ರಾಜ್ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT