ಗುರುವಾರ , ಜೂನ್ 24, 2021
29 °C

ಲಾರಿ ಲೋಡ್ ಸಮೇತ ದರೋಡೆ: ₹24 ಲಕ್ಷ ಮೌಲ್ಯದ ಅಕ್ಕಿ, ಕಡಲೆ, ತೊಗರಿ ಬೇಳೆ ದರೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾಲ್ಕಿ: ಸಿನಿಮಿಯ ರೀತಿಯಲ್ಲಿ ದುಷ್ಕರ್ಮಿಗಳು ಲಾರಿ ಲೋಡ್ ಸಮೇತ ದರೋಡೆ ಮಾಡಿರುವ ಘಟನೆ ತಾಲ್ಲೂಕಿನ ವಳಸಂಗ ಕ್ರಾಸ್ ಸಮೀಪ ಮಂಗಳವಾರ ರಾತ್ರಿ ಸಂಭವಿಸಿದೆ.

ಉದಗೀರನ್ ಸಚಿನ್ ಆಗ್ರೋ ಫುಡ್ ಎಲ್.ಎಲ್.ಪಿ ಮೀಲ್‌ನಿಂದ 30 ಕ್ವಿಂಟಲ್ ಕಡಲೆ ಬೇಳೆ, ₹1.98 ಲಕ್ಷ ಮೌಲ್ಯದ ಅಕ್ಕಿ ಮತ್ತು ಸಂದೀಪ ದಾಲ್ ಇಂಡಸ್ಟ್ರೀಜ್ ಮೀಲ್‌ನಿಂದ 225 ಕ್ವಿಂಟಲ್ ತೊಗರಿ ಬೇಳೆ ಹೊತ್ತುಕೊಂಡು ಬರುತ್ತಿದ್ದ ಎಪಿ 26 ಟಿ.ಡಿ.4284 ಸಂಖ್ಯೆಯ ಲಾರಿ ಕಾವೇರಿ, ನೆಲ್ಲೂರ್ ಕಡೆ ಹೊರಟಿತ್ತು. ಮಂಗಳವಾರ ರಾತ್ರಿ 9.30 ಗಂಟೆ ಸುಮಾರಿಗೆ ವಳಸಂಗ ಕ್ರಾಸ್ ಸಮೀಪ ಲೋಡ್ ಹೊತ್ತಿದ್ದ ಲಾರಿ ಬರುತ್ತಿದ್ದಂತೆಯೇ 5 ಬೈಕ್‌ಗಳ ಮೇಲೆ ಬಂದ 10 ದುಷ್ಕರ್ಮಿಗಳು ಲಾರಿಯನ್ನು ತಡೆದಿದ್ದಾರೆ. ಲಾರಿ ಚಾಲಕ ಹಾಗೂ ಕ್ಲೀನರ್‌ಗೆ ಹೆದರಿಸಿ ಇಬ್ಬರನ್ನು ಕೆಳಗೆ ಇಳಿಸಿ ಲೋಡ್ ಲಾರಿ ಸಮೇತ ಪರಾರಿ ಆಗಿದ್ದಾರೆ.

ಈ ಕುರಿತು ನೆಲ್ಲೂರ್ ಮೂಲದ ಲಾರಿ ಚಾಲಕ ಟಿ.ಬಾಬು ರಾಮಯ್ಯ ನೀಡಿರುವ ದೂರಿನ ಮೇರೆಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು