ಹುಲಸೂರ(ಬೀದರ್ ಜಿಲ್ಲೆ): ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ಉಕ್ಕಿ ಹರಿಯುತ್ತಿರುವ ನದಿಯ ಪ್ರವಾಹದ ನೀರಿಗಿಳಿದು ಬೆಳೆಹಾನಿ ಪರಿಶೀಲಿಸಿದರು.

ಬೀದರ್ ಜಿಲ್ಲೆಯ ಮಾಂಜ್ರಾ ನದಿಯು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ರೈತರೊಬ್ಬರು ಬೆಳೆದ ತೊಗರಿ ಬೆಳೆಯು ಸಂಪೂರ್ಣ ಜಲಾವೃತಗೊಂಡಿತ್ತು. ರೈತರ ಜೊತೆಗೆ ಶಾಸಕರೂ ಪ್ರವಾಹದ ನೀರಿನಲ್ಲಿ ಇಳಿದು ಬೆಳೆಯನ್ನು ವೀಕ್ಷಿಸಿದರು.

‘ಕೃಷಿ ಹಾಗೂ ಕಂದಾಯ ಸಚಿವರು ಬೆಂಗಳೂರು, ಮಂಡ್ಯ, ಬೆಳಗಾವಿ ಜಿಲ್ಲೆಗಳನ್ನು ಬಿಟ್ಟು, ಕೂಡಲೇ ಬೀದರ್ ಜಿಲ್ಲೆಯ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ರೈತರ ಗೋಳು ಕೇಳಬೇಕು. ಸರ್ಕಾರ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು’ ಎಂದು ಶಾಸಕ ಶರಣು ಸಲಗರ ಅವರು ಸೊಂಟದವರೆಗಿನ ಮಟ್ಟದ್ದ ಪ್ರವಾಹದ ನೀರಲ್ಲಿಯೇ ನಿಂತು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.