ಸೋಮವಾರ, ಅಕ್ಟೋಬರ್ 26, 2020
20 °C

ಸಚಿವರಿಂದ ಬೆಳೆ ಹಾನಿ ಪರಿಶೀಲನೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರು ಅಕ್ಟೋಬರ್ 8ರಂದು ಜಿಲ್ಲೆಯ ಕೋಳಾರ, ಆಣದೂರು, ಹಲಬರ್ಗಾ, ಹೊಳಸಮುದ್ರ, ಡಿಗ್ಗಿ ಹಾಗೂ ಕಮಲನಗರಕ್ಕೆ ಭೇಟಿ ನೀಡಿ ಅತಿವೃಷ್ಟಿಯಿಂದ ಆಗಿರುವ ಬೆಳೆಹಾನಿಯನ್ನು ಪರಿಶೀಲಿಸುವರು.

ಬೆಳಿಗ್ಗೆ 9ಕ್ಕೆ ಬೋಂತಿಯಿಂದ ರಸ್ತೆ ಮಾರ್ಗವಾಗಿ ಬೀದರ್‍ಗೆ ಬರುವರು. ಬೆಳಿಗ್ಗೆ 11.30ಕ್ಕೆ ಈಚೆಗೆ ನಿಧನರಾದ ಜಿಲ್ಲಾ ಪಂಚಾಯಿತಿ ಸದಸ್ಯ ಅನಿಲ್ ಗುಂಡಪ್ಪ ಅವರ ಮನೆಗೆ ಭೇಟಿ ನೀಡುವರು.

ಮಧ್ಯಾಹ್ನ 12ಕ್ಕೆ ಕೋಳಾರ, ಮಧ್ಯಾಹ್ನ 12.30ಕ್ಕೆ ಆಣದೂರು, ಮಧ್ಯಾಹ್ನ 1.30ಕ್ಕೆ ಹಲಬರ್ಗಾ, ಮಧ್ಯಾಹ್ನ 2.30ಕ್ಕೆ ಹೊಳಸಮುದ್ರ, ಮಧ್ಯಾಹ್ನ 3.30ಕ್ಕೆ ಡಿಗ್ಗಿ ಹಾಗೂ ಸಂಜೆ 4.30ಕ್ಕೆ ಕಮಲನಗರಕ್ಕೆ ಭೇಟಿ ನೀಡಿ ಬೆಳೆ ಪರಿಶೀಲಿಸುವರು.

ಸಂಜೆ 5.30ಕ್ಕೆ ಕಮಲನಗರದಿಂದ ಉದಗೀರಕ್ಕೆ ಪ್ರಯಾಣಿಸಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಸಂಜೆ 6ಕ್ಕೆ ಉದಗೀರನಿಂದ ರಸ್ತೆ ಮೂಲಕ ಬೋಂತಿ ತಾಂಡಾಕ್ಕೆ ತೆರಳಿ ವಾಸ್ತವ್ಯ ಮಾಡುವರು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.