ಸೋಮವಾರ, ಮೇ 16, 2022
29 °C

ಚನ್ನಬಸವನಗರ: ಗಂಗಾಂಬಿಕೆ ಅಕ್ಕ ಪ್ರವಚನ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಬಸವನಗರ: ಗಂಗಾಂಬಿಕೆ ಅಕ್ಕ ಪ್ರವಚನ ಇಂದಿನಿಂದ

ಬೀದರ್: ನಗರದ ಕರ್ನಾಟಕ ಕಾಲೇಜು ಹಿಂದುಗಡೆಯ ಚನ್ನಬಸವನಗರದಲ್ಲಿ ಬಸವ ಜಯಂತಿ ನಿಮಿತ್ತ ಮೇ 13 ರಿಂದ 15 ರ ವರೆಗೆ ಪ್ರತಿ ದಿನ ಸಂಜೆ 6.30 ರಿಂದ 7.30 ರ ವರೆಗೆ ‘ಬಸವಣ್ಣನಿಂದ ಬದುಕಿತ್ತೀಲೋಕ’ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬಸವ ಸೇವಾ ಪ್ರತಿಷ್ಠಾನದ  ಗಂಗಾಂಬಿಕೆ ಅಕ್ಕ ಅವರು ಪ್ರವಚನ ನಡೆಸಿಕೊಡಲಿದ್ದಾರೆ. ಮೇ 15 ಸಮಾರೋಪ ಸಮಾರಂಭ ನಡೆಯಲಿದೆ.
ಬಸವಾನುಯಾಯಿಗಳು ಹಾಗೂ ಸಾರ್ವಜನಿಕರು ಪ್ರವಚನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಚನ್ನಬಸವನಗರ ಬಸವ ಜಯಂತಿ ಉತ್ಸವ ಸಮಿತಿಯ ಪ್ರಮುಖರು ಮನವಿ ಮಾಡಿದ್ದಾರೆ. 

* * *

ನಾಳೆ ವಿದ್ಯುತ್ ವ್ಯತ್ಯಯ
ಬೀದರ್: ನಗರದ ಗುಂಪಾದ 11 ಕೆ.ವಿ. ಫೀಡರ್ ಮೇಲೆ ತುರ್ತು ನಿರ್ವಹಣೆ ಕೆಲಸದ ನಿಮಿತ್ತ ಅಲ್ಲಮಪ್ರಭುನಗರ, ಶಿವಾಜಿ ನಗರ, ಕೃಷ್ಣ ಕಾಲೊನಿ, ಸಿಎಂಸಿ ಕಾಲೊನಿ, ಗಾಂಧಿನಗರ, ವಡ್ಡರ ಕಾಲೊನಿ, ಸಂಗಮೇಶ್ವರ ಕಾಲೊನಿ, ಚಿದ್ರಿ ಕಾಲೊನಿ, ಮೈಲೂರಿನ ಶಾಸ್ತ್ರಿ ನಗರ ಪ್ರದೇಶಗಳಲ್ಲಿ ಮೇ 14 ರಂದು ಬೆಳಿಗ್ಗೆ 10 ರಿಂದ ಸಂಜೆ 4 ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ಪ್ರಕಟಣೆ ತಿಳಿಸಿದೆ.

****
ನಾಲ್ವರು ಬಾಲ ಕಾರ್ಮಿಕರ ರಕ್ಷಣೆ

ಬೀದರ್: ನಗರದಲ್ಲಿ ಗುರುವಾರ ನಾಲ್ವರು ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ.
ಕಾರ್ಮಿಕ ಇಲಾಖೆ, ಬಾಲ ಕಾರ್ಮಿಕ ಯೋಜನೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ ಪ್ರತಿನಿಧಿಗಳು ಜಂಟಿಯಾಗಿ ಅಂಗಡಿ, ಧಾಬಾ, ಹೊಟೇಲ್, ಗ್ಯಾರೇಜ್‍ಗಳ ಮೇಲೆ ಹಠಾತ್ ದಾಳಿ ನಡೆಸಿ, ಬಾಲ ಕಾರ್ಮಿಕರನ್ನು ರಕ್ಷಿಸಿದರು.
ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಂಡು, ನಾಲ್ವರು ಬಾಲ ಕಾರ್ಮಿಕ ಮಕ್ಕಳಿಗೆ ಸರ್ಕಾರಿ ಬಾಲಕರ ಬಾಲ ಮಂದಿರದಲ್ಲಿ ಪುನರ್ವಸತಿ ಕಲ್ಪಿಸಿದರು.
ಕಾರ್ಮಿಕ ನಿರೀಕ್ಷಕಿ ಕೆ. ಸುವರ್ಣಾ, ಬಾಲ ಕಾರ್ಮಿಕ ಯೋಜನೆಯ ಅರ್ಜುನ ಸಿತಾಳಗೇರಾ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಗೌರಿಶಂಕರ ಪ್ರತಾಪುರೆ, ಮಕ್ಕಳ ಸಹಾಯವಾಣಿ ಸಿಬ್ಬಂದಿ ನೆಲ್ಸನ್, ಜಾನ್ಸನ್, ಗಾಂಧಿಗಂಜ್ ಪಿಎಸ್‍ಐ ಸವಿತಾ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.