ಶನಿವಾರ, ಡಿಸೆಂಬರ್ 4, 2021
20 °C

ಜನವಾಡ: ಕೊರೊನಾ ವಾರಿಯರ್‌ಗಳಿಗೆ ಆರೋಗ್ಯ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನವಾಡ: ಬೀದರ್ ತಾಲ್ಲೂಕಿನ ಕಮಠಾಣದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಆರೋಗ್ಯ ಹಸ್ತ ಮಾಹಿತಿ ತರಬೇತಿ ಕಾರ್ಯಕ್ರಮದಲ್ಲಿ ಪಕ್ಷದ ಕೊರೊನಾ ವಾರಿಯರ್‌ಗಳಿಗೆ ಆರೋಗ್ಯ ಕಿಟ್ ವಿತರಿಸಲಾಯಿತು.

ಕೊರೊನಾ ಸೋಂಕಿನ ಕಾರಣ ಜನರಿಗೆ ನೆರವಾಗಲು ಕಾಂಗ್ರೆಸ್ ಪಕ್ಷವು ಪ್ರತಿ ಪಂಚಾಯಿತಿಗೆ ಇಬ್ಬರು ಕಾರ್ಯಕರ್ತರನ್ನು ಕೊರೊನಾ ವಾರಿಯರ್‍ಗಳಾಗಿ ನೇಮಕ ಮಾಡಿದೆ ಎಂದು ಆರೋಗ್ಯ ಹಸ್ತ ಕಾರ್ಯಕ್ರಮದ ತರಬೇತುದಾರ ಡಾ. ರವೀಂದ್ರ ತಿಳಿಸಿದರು.

ಕೊರೊನಾ ವಾರಿಯರ್‍ಗಳು ಹಳ್ಳಿಗಳಲ್ಲಿ ಜನರ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಅವರಿಗೆ ಪಕ್ಷ ಒಂದು ಲಕ್ಷ ರೂಪಾಯಿಯ ವಿಮೆ ಸೌಲಭ್ಯ ಒದಗಿಸಲಿದೆ ಎಂದು ಹೇಳಿದರು.

ಮಾಜಿ ಶಾಸಕ ಅಶೋಕ ಖೇಣಿ ಅವರು ಕೊರೊನಾ ಆರಂಭದಿಂದಲೂ ಜನರಿಗೆ ಹಲವು ರೀತಿಯಲ್ಲಿ ಸಹಾಯಹಸ್ತ ಚಾಚುತ್ತ ಬಂದಿದ್ದಾರೆ. ಕ್ಷೇತ್ರದ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಇದೀಗ ಕ್ಷೇತ್ರ ವ್ಯಾಪ್ತಿಯ ಪಂಚಾಯಿತಿಗಳಿಗೆ ಕೊರೊನಾ ವಾರಿಯರ್‍ಗಳನ್ನು ನೇಮಕ ಮಾಡಿದ್ದಾರೆ ಎಂದು ಕಾಂಗ್ರೆಸ್ ಬೀದರ್ ದಕ್ಷಿಣ ಬ್ಲಾಕ್ ಕಮಿಟಿ ಅಧ್ಯಕ್ಷ ಚಂದ್ರಶೇಖರ ಚನಶೆಟ್ಟಿ ತಿಳಿಸಿದರು.

ಡಾ. ಮಕ್ಸೂದ್ ಚಂದಾ, ಡಾ. ಸಚಿನ್ ಪಟ್ನೆ, ಕಾಂಗ್ರೆಸ್ ಬೀದರ್ ದಕ್ಷಿಣ ಬ್ಲಾಕ್ ಕಮಿಟಿ ಅಧ್ಯಕ್ಷ ರುಕ್ಮಾರೆಡ್ಡಿ ಪಾಟೀಲ, ಮುಖಂಡರಾದ ಕರೀಂಸಾಬ್ ಕಮಠಾಣ, ಸಮಿಯೊದ್ದಿನ್, ಖಾಲೇದ್ ಖಮರ್, ಸಂತೋಷ ಪಾಟೀಲ, ಸಾಯಿನಾಥ ತೇಗಂಪುರ, ಉಮೇಶ ಶಹಾಪುರ, ಬಸವರಾಜ ಬೇಮಳಖೇಡ, ರಮೇಶ ಹೌದಖಾನಿ, ಅಮೃತರಾವ್ ಪಾಟೀಲ, ಬಶೀರೊದ್ದಿನ್ ಬಗದಲ್, ಪ್ರಭು ಪಸರಗಿ, ರಾಘವೇಂದ್ರ ಉಡಬಾಳ, ರಾಜು ತರಿ, ಸೂರ್ಯಕಾಂತ ಪಾಟೀಲ, ಬಶಿರೊದ್ದಿನ್ ಬಗದಲ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು