ಬುಧವಾರ, ಜನವರಿ 19, 2022
24 °C
ನಿರ್ಣಾ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಬಾಬುರೆಡ್ಡಿ ಅಭಿಮತ

ಮನುಷ್ಯನಿಗೆ ಶಿಕ್ಷಣ, ಸಂಸ್ಕಾರ ಅವಶ್ಯ: ಬಾಬುರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ‘ಜೀವನ ಉಜ್ವಲಗೊಳ್ಳಬೇಕಾದರೆ ಶಿಕ್ಷಣ ಮತ್ತು ಸಂಸ್ಕಾರ ಅವಶ್ಯ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಬಾಬುರೆಡ್ಡಿ ಅಭಿಪ್ರಾಯಪಟ್ಟರು.

ನಾಗಯ್ಯ ವೀರಯ್ಯ ಮಠಪತಿ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಿರ್ಣಾ ಗ್ರಾಮದಲ್ಲಿ ನಡೆದ ನಾಗಯ್ಯ ವೀರಯ್ಯ ಸ್ವಾಮೀಜಿ ಅವರ 26ನೇ ಸ್ಮರಣೋತ್ಸವ, ಅಪೆಕ್ಸ್‌ ನಂದಿನಿ ವಿದ್ಯಾಲಯದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಅಗತ್ಯ. ಯಾವ ಶಿಕ್ಷಣದಿಂದ ಅಜ್ಞಾನ ದೂರವಾಗುತ್ತದೆಯೋ ಅದನ್ನು ಪರಿಪೂರ್ಣ ಸಾಕ್ಷಾತ್ಕಾರದ ದೀಕ್ಷಾ ಬೋಧನೆ ಎನ್ನಲಾಗುತ್ತದೆ ಎಂದರು.

ಜೆಸ್ಕಾಂ ಜಾಗೃತ ದಳದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್ ಸಂಗಮೇಶ್‌ ಮಾತನಾಡಿ,‘ನಂದಿನಿ ವಿದ್ಯಾಲಯದ ವತಿಯಿಂದ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ದೊರಕುತ್ತಿದೆ. ವಿದ್ಯಾಲಯ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ಮಠಪತಿ ಸಂಸ್ಥಾನದ ಕಾರ್ಯ ಶ್ಲಾಘನೀಯ’ ಎಂದರು.

ಉಪನ್ಯಾಸಕ ನೀಲಕಂಠ ಇಸ್ಲಾಮಪುರ್‌ ಮಾತನಾಡಿ,‘ಬತ್ತಿ, ಪ್ರಣತೆ, ತೈಲ ಎಲ್ಲವೂ ಇದ್ದಾಗಲೂ ಜ್ಯೋತಿ ಬೆಳಗಿಸಲು ಚಾಲನಾ ಶಕ್ತಿ ಬೇಕಾಗುವಂತೆ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣಕ್ಕೆ ವಿದ್ಯಾಮಂದಿರಗಳ ಅವಶ್ಯಕತೆ ಇದೆ. ಬದುಕಿನಲ್ಲಿ ಯಶಸ್ಸು ಕಾಣಲು ನಿರಂತರ ಶ್ರಮ ವಹಿಸಬೇಕಾಗುತ್ತದೆ. ನಂದಿನಿ ವಿದ್ಯಾಲಯದಲ್ಲಿ ಬೆಳೆಯುತ್ತಿರುವ ಮಕ್ಕಳು ಭಾಗ್ಯಶಾಲಿಗಳಾಗಿ ಉತ್ತಮ ಶಿಕ್ಷಣ, ಸಂಸ್ಕಾರ ಕಲಿತು, ಸಂಸ್ಥೆಗೆ ಕೀರ್ತಿ ತರಬೇಕು’ ಎಂದು ಹೇಳಿದರು.

ಉದ್ಯಮಿ ಅಸ್ಲಾಮ ಮಿಯ್ಯ, ಪತ್ರಕರ್ತ ಶೈಲೇಂದ್ರ ಕಾವಡಿ ಮಾತನಾಡಿದರು.

ಸಿಂದನಕೇರಾದ ಹೊನ್ನಲಿಂಗ ಸ್ವಾಮೀಜಿ ಸಹೋದರತ್ವ ಹಾಗೂ ಬಾಂಧವ್ಯದ ಕುರಿತು ತಿಳಿಸಿದರು.

ಮುಂಬೈನ ಪಿ.ಟಿ.ಉಷಾ ಸ್ಥಾಪಿತ ಭಾರತ ಪ್ರತಿಭಾ ಅಕಾಡೆಮಿಯಿಂದ ರಾಜ್ಯ ಮಟ್ಟಕ್ಕೆ ಅಗ್ರ ಶ್ರೇಣಿ ಪಡೆದ ನಂದಿನಿ ವಿದ್ಯಾಲಯದ ಮಹೇಶ್‌ ಓಂಕಾರ್‌, ತನೀಶ್‌ ಓಂಕಾರ್‌, ಶ್ವೇತಾ ಈರಪ್ಪ, ಪ್ರಜ್ವಲ ಶಂಭುಲಿಂಗ್‌, ವಿಜಯಲಕ್ಷ್ಮಿ ಶಿವರಾಜ ಅವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾಲಯಕ್ಕೆ ಅಗ್ರಶ್ರೇಣಿ ಪಡೆದಿದ್ದ ಅಜಯ ತುಕಾರಾಮ, ರವಿರಾಜ್‌ ಶಿವರಾಜ್‌, ಕರಿಮಸಾಬ್‌ ಮೀರಸಾಬ್‌ ಅವರನ್ನು ಸನ್ಮಾನಿಸಲಾಯಿತು.

ಪತ್ರಕರ್ತ ಸಂಜುಕುಮಾರ ಬುಕ್ಕಾ, ಗಣ್ಯರಾದ ಅಶೋಕ ಲಚ್ಚನಗಾರ್‌, ವಿಠಲರೆಡ್ಡಿ ಚುಡಾ, ಮಚ್ಛಂದ್ರ ಪತ್ತಾರ, ಘಾಳಯ್ಯ ಸ್ವಾಮಿ, ಸುಭಾಷ ಪಾಲಾಟಿ, ಮಲ್ಲಯ್ಯ ಸ್ವಾಮಿ ಹಾಗೂ ಬಸವರಾಜ ಬನ್ನಳ್ಳಿ ಇದ್ದರು.

ಇಟಗಾ ಮುಕ್ತಿಮಠದ ಹಿರಿಯ ಪೀಠಾಧಿಪತಿ ಚನ್ನಮಲ್ಲೇಶ್ವರ ತ್ಯಾಗಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಂಕರರಾವ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗುರುಸ್ವಾಮಿ ನಿರೂಪಿಸಿದರು. ಮುಖ್ಯಶಿಕ್ಷಕಿ ಉಮಾಶ್ರೀ ವಂದಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು