ಬೀದರ್: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ಸೇರಿದ ನಗರದ ಪನ್ನಾಲಾಲ್ ಹೀರಾಲಾಲ್ ಶಾಲೆ ಸಮೀಪದ ನಿವೇಶನದಲ್ಲಿ ಶನಿವಾರ ಪೂಜೆ ನೆರವೇರಿಸಲಾಯಿತು.

‘ನಿವೇಶನದಲ್ಲಿ ಎರಡು ಮಹಡಿ ಕಟ್ಟಡ ನಿರ್ಮಿಸಲು ಯೋಜಿಸಲಾಗಿದೆ. 3,446 ಚದರ್ ಅಡಿಯ ನಿವೇಶನದಲ್ಲಿ ನೆಲ ಮಹಡಿಯಲ್ಲಿ ವಾಣಿಜ್ಯ ಸಂಕೀರ್ಣ, ಮೊದಲ ಮಹಡಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ, ಗ್ರಂಥಾಲಯ, ಅತಿಥಿಗಳ ವಾಸ್ತವ್ಯಕ್ಕೆ 10 ಕೊಠಡಿಗಳನ್ನು ಕಟ್ಟಲು ಉದ್ದೇಶಿಸಲಾಗಿದೆ’ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದರು.

ಸಂಘದ ವತಿಯಿಂದ ಎನ್‍ಜಿಒ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಿಂದ 1976ರಲ್ಲಿ ₹5 ಸಾವಿರದಲ್ಲಿ ನಿವೇಶನ ಖರೀದಿಸಲಾಗಿತ್ತು. ನಿವೇಶನಕ್ಕೆ ಸಂಬಂಧಿಸಿದಂತೆ ಬೀದರ್ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ವ್ಯಾಜ್ಯ ಬಗೆಹರಿದು ಸಂಘದ ಪರ ತೀರ್ಪು ಬಂದಿದೆ ಎಂದರು.

ಸಂಘದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಬಸವರಾಜ ಜಕ್ಕಾ, ಕಾರ್ಯಾಧ್ಯಕ್ಷ ರಾಜಕುಮಾರ ಹೊಸದೊಡ್ಡೆ, ಉಪಾಧ್ಯಕ್ಷೆ ಡಾ. ವೈಶಾಲಿ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಪ್ರಮುಖರಾದ ಓಂಕಾರ ಮಲ್ಲಿಗೆ, ಸಂತೋಷಕುಮಾರ ಚಲುವಾ, ಸಂಜು ಬಿ. ಸೂರ್ಯವಂಶಿ, ಬಲವಂತರಾವ್ ರಾಠೋಡ್, ಸುನೀಲಕುಮಾರ, ಗಣಪತಿ ಜಮಾದಾರ್, ಸಾವಿತ್ರಮ್ಮ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.