ಬುಧವಾರ, ಅಕ್ಟೋಬರ್ 20, 2021
22 °C
ಲಖಿಂಪುರ-ಖೇರಿಯಲ್ಲಿ ನಡೆದ ರೈತರ ಕೊಲೆ ಯತ್ನಕ್ಕೆ ಖಂಡನೆ

ಅಜಯ್‌ ಮಿಶ್ರಾರನ್ನು ಸಂಪುಟದಿಂದ ಕೈಬಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಉತ್ತರಪ್ರದೇಶದ ಲಖಿಂಪುರ–ಖೇರಿಯಲ್ಲಿ ನಡೆದ ರೈತರ ಕೊಲೆ ಯತ್ನ ಖಂಡಿಸಿ ಸಂಯುಕ್ತ ಕಿಸಾನ್‌ ಹಾಗೂ ಮಜ್ದೂರ್ ಮೋರ್ಚಾ ಕಾರ್ಯಕರ್ತರು ನಗರದ ಅಂಬೇಡ್ಕರ್‌ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿ ಗಡಿಯಲ್ಲಿ 11 ತಿಂಗಳಿಂದ ಚಳವಳಿ ನಡೆಸುತ್ತಿದ್ದಾರೆ.
ಚಳವಳಿಯಲ್ಲಿ ಭಾಗವಹಿಸುವವರನ್ನು ನಕಲಿ ರೈತರು ಹಾಗೂ ಖಲಿಸ್ತಾನಿ ಎಂದು ಬಿಜೆಪಿ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಅಪಪ್ರಚಾರದಿಂದಾಗಿಯೆ ಲಖಿಂಪುರದಲ್ಲಿ ಕಾರು ಹಾಯಿಸಿ ರೈತರ ಹತ್ಯೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಸಾಮಾನ್ಯ ಜನರಿಗೊಂದು ಮಂತ್ರಿಯ ಮಕ್ಕಳಿಗೆ ಇನ್ನೊಂದು ನೀತಿ ಅನುಸರಿಸುತ್ತಿದೆ. ದೇಶದಾದ್ಯಂತ ಪ್ರತಿಭಟನೆ ವ್ಯಕ್ತವಾದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಅಖಿಲ ಭಾರತ ಕಿಸಾನ್ ಸಭಾ, ಕರ್ನಾಟಕ ರಾಜ್ಯ ರೈತ ಸಂಘ (ಪುಟ್ಟಣ್ಣಯ್ಯ ಬಣ), ಸಂಯುಕ್ತ ಕಿಸಾನ್ ಮತ್ತು ಮಜ್ದೂರ್ ಮೋರ್ಚಾ ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರು ನಗರದ ಅಂಬೇಡ್ಕರ್‌ ವೃತ್ತದಲ್ಲಿ ಮೃತ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಿ ನಂತರ ಮೆರವಣಿಗೆಯಲ್ಲಿ ಸಾಗಿ ರಾಷ್ಟ್ರಪತಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಕೇಂದ್ರ ಗೃಹ ಸಚಿವ ಅಜಯ್‌ ಮಿಶ್ರಾ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ರೈತ ಚಳವಳಿಯ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಹರಿಯಾಣದ ಮುಖ್ಯಮಂತ್ರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಿಸಾನ್‌ ಸಭಾ ರಾಜ್ಯ ಉಪಾಧ್ಯಕ್ಷ ಬಾಬುರಾವ್ ಹೊನ್ನಾ, ಕರ್ನಾಟಕ ರಾಜ್ಯ ರೈತ ಸಂಘ (ಪುಟ್ಟಣಯ್ಯ ಬಣ)ದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಖಮರ್ ಪಟೇಲ್, ಕರ್ನಾಟಕ ಕೂಲಿ ಕಾರ್ಮಿಕರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ರಮೇಶ ಪಾಸ್ವಾನ್, ಕರ್ನಾಟಕ ಪ್ರಜಾಶಕ್ತಿ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಸಿಂಧೆ, ಸೈಯದ್ ಮನ್ಸೂರ್ ಅಹ್ಮದ್ ಖಾದ್ರಿ, ವಿವಿಧ ಸಂಘಟನೆಗಳ ಪ್ರಮುಖರಾದ ವಿಠ್ಠಲ್ ರೆಡ್ಡಿ, ಶಾಹನೂರ್, ಶಾಂತಮ್ಮ ಹಜನಾಳ್, ನಾಗಶೆಟ್ಟಿ ರಂಜವಾಳ, ಆರ್.ಪಿ. ರಾಜಾ, ಬಸವರಾಜ ಅಷ್ಟೂರ, ರಾಜಕುಮಾರ ಮೂಲಭಾರತಿ, ಲಕ್ಷ್ಮಿ ದಂಡೆ, ಇಮಾನುವೆಲ್ ಗಾದಗಿ, ಬಸವರಾಜ ಪಾಟೀಲ, ಬಾಬುರಾವ್ ವಾಡೇಕರ್, ಶಫಾಯತ್, ಪ್ರಭು ತಗಣಿಕರ್, ಪಪ್ಪುರಾಜ ಮೇತ್ರೆ, ಧನರಾಜ ಮಸ್ತಾಪೂರ್, ಅರುಣ ಪಟೇಲ್, ಸುಬ್ಬಣ್ಣ ಕರಕನಳ್ಳಿ, ಗೌತಮ ಭೋಸ್ಲೆ, ಧನರಾಜ್ ಕೋಳಾರ, ರಾಹುಲ್ ಢಾಂಗೆ, ಭಗತ್ ಸಿಂಧೆ. ಸ್ವರೂಪಕುಮಾರ ಸಿಂಧೆ, ಸಿರಾಜ್ ಪಟೇಲ್, ಸುನೀಲ ವರ್ಮಾ ಗುಂಡೆರಾಮ ಕುಲಕರ್ಣಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು