ಹೊನ್ನಿಕೇರಿ(ಜನವಾಡ): ಬೀದರ್ ತಾಲ್ಲೂಕಿನ ಹೊನ್ನಿಕೇರಿ ಗ್ರಾಮದಲ್ಲಿ ವಿಜಯದಶಮಿ ಪ್ರಯುಕ್ತ ಗುರುವಾರ ಧ್ವಜ ಉತ್ಸವ ಜರುಗಿತು.

ಉತ್ಸವದ ಅಂಗವಾಗಿ ಗ್ರಾಮದ ಸಿದ್ಧೇಶ್ವರ ದೇವಸ್ಥಾನದ ಪೀಠಾಧಿಕಾರಿ ಅವರ ಮನೆಯಿಂದ ಸಿದ್ಧೇಶ್ವರ ದೇವಸ್ಥಾನದ ವರೆಗೆ ಧ್ವಜದ ಮೆರವಣಿಗೆ ನಡೆಯಿತು.

ನಂತರ ಹುಣಸೆ ಮತ್ತು ಆಲದ ಮರಗಳಿಗೆ ಧ್ವಜ ಕಟ್ಟಿ, ಸಿದ್ಧೇಶ್ವರ ಹಾಗೂ ಮಲ್ಲಿಕಾರ್ಜುನ ದೇವರಿಗೆ ನೈವೇದ್ಯ ಸಮರ್ಪಣೆ ಮಾಡಲಾಯಿತು.

‘ಗ್ರಾಮದಲ್ಲಿ ಹಿಂದಿನಿಂದಲೂ ಧ್ವಜ ಉತ್ಸವ ಮಾಡುತ್ತಾ ಬರಲಾಗಿದೆ. ಸಿದ್ಧೇಶ್ವರ ದೇವಸ್ಥಾನದ ಪೀಠಾಧಿಕಾರಿಯಾಗಿದ್ದ ಸಿದ್ಧಲಿಂಗಯ್ಯ ಸ್ವಾಮಿ ಪೂಜಾರಿ ಅವರ ನಿಧನದ ನಂತರ ಅವರ ಕಿರಿಯ ಪುತ್ರ ನಾಗಯ್ಯ ಸ್ವಾಮಿ ಉತ್ಸವ ಮುಂದುವರಿಸಿಕೊಂಡು ಬರುತ್ತಿದ್ದಾರೆ’ ಎಂದು ಪ್ರಶಾಂತಯ್ಯ ಸ್ವಾಮಿ ಹೇಳಿದರು.

ಸಿದ್ಧೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಿದ್ಧಯ್ಯ ಸ್ವಾಮಿ, ಪ್ರಮುಖರಾದ ನಾಗಯ್ಯ ಸ್ವಾಮಿ, ರಾಜಕುಮಾರ ಬಾಬಯ್ಯ, ಶ್ರೀಕಾಂತಯ್ಯ, ಗುರುಶಾಂತಯ್ಯ, ಆಕಾಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.