ಹುಲಸೂರ: ಕಳೆದ ತಿಂಗಳು ಸುರಿದ ಬಾರಿ ಮಳೆ ಹಾಗೂ ಮಹಾರಾಷ್ಟ್ರದಿಂದ ಮಾಂಜ್ರಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಟ್ಟ ಪರಿಣಾಮ ಹಿನ್ನೀರಿನ ಅಬ್ಬರಕ್ಕೆ ಅನೇಕ ರಸ್ತೆಗಳು ಕೊಚ್ಚಿ ಹೋಗಿವೆ.

ಹುಲಸೂರ ಹಾಗೂ ಭಾಲ್ಕಿ ತಾಲ್ಲೂಕಿನ ವಿವಿಧ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡು ಸಾರ್ವಜನಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಹುಲಸೂರದಿಂದ ಕೊಂಗಳಿ ಮಾರ್ಗವಾಗಿ ಮೆಹಕರ, ವಾಂಝರಖೇಡ ಸೇರಿದಂತೆ ಭಾಲ್ಕಿ ತಾಲ್ಲೂಕಿನ ವಿವಿಧ ಗ್ರಾಮಗಳಿಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾದ ಕಾರಣ ವ್ಯಾಪಾರ ವಹಿವಾಟು, ಶೈಕ್ಷಣಿಕ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ.

ಪ್ರವಾಹದ ರಭಸಕ್ಕೆ ಸುಮಾರು 1 ಕಿ.ಮೀ ರಸ್ತೆ ಹಾಳಾಗಿದ್ದು, ದೊಡ್ಡ ತಗ್ಗುಗಳು ನಿರ್ಮಾಣವಾಗಿವೆ.

ಸಂಕಷ್ಟದಲ್ಲಿ ರೈತರು: ಕೆಲ ದಿನಗಳಿಂದ ಸೊಯಾಅವರೆ ಕಟಾವು ಕಾರ್ಯ ನಡೆಯುತ್ತಿದ್ದು ರೈತರು ಫಸಲು ಮಾರಾಟಕ್ಕೆ ಕೊಂಗಳಿ ಬ್ರಿಜ್ ಕಂ ಬ್ಯಾರೇಜ್ ರಸ್ತೆ ಮೂಲಕ ಬೀದರ್, ಲಾತೂರ್ ಸೇರಿದಂತೆ ಬೇರೆ ಬೇರೆ ಕಡೆ ಹೋಗುತ್ತಿದ್ದರು. ಆದರೆ ರಸ್ತೆ ಹಾಳಾಗಿದ್ದರಿಂದ ರೈತರು ಬೆಳೆದ ಫಸಲು ಸಾಗಿಸಲು ಹತ್ತಿರದ ಮಾರ್ಗಗಳನ್ನು ಹುಡುಕುವ ಸಂಕಷ್ಟದ ಸ್ಥಿತಿ ಎದುರಿಸುವಂತಾಗಿದೆ.

ರಸ್ತೆ ಗುಂಡಿಮಯ: ಹುಲಸೂರಿನಿಂದ ಕೊಂಗಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 6 ಕೀ.ಮೀ ರಸ್ತೆ ಹಾಳಾಗಿದೆ. ರಸ್ತೆಯಲ್ಲಿ ಗುಂಡಿಗಳ ನಿರ್ಮಾಣದಿಂದ ಸುಗಮ ಸಂಚಾರಕ್ಕೆ ಸಂಚಕಾರ ಎದುರಾಗಿದೆ.

ರಸ್ತೆಯಲ್ಲಿ ಹಾಕಿದ ಡಾಂಬರ್ ಸಂಪೂರ್ಣ ಕಿತ್ತು ಹೋಗಿದ್ದು, ರಸ್ತೆ ಜಲ್ಲಿಕಲ್ಲು, ತಗ್ಗುಗಳಿಂದ ಕೂಡಿದೆ. ರಾತ್ರಿ ಸಮಯದಲ್ಲಿ ರೋಗಿಗಳು, ವೃದ್ಧರು, ವಾಹನ ಸವಾರರು ಈ ಮಾರ್ಗದಲ್ಲಿ ಸಂಚರಿಸುವಾಗ ನರಕಯಾತನೆ ಅನುಭವಿಸುತ್ತಿದ್ದಾರೆ. ನಿತ್ಯ ಇಲ್ಲಿ ಸಂಚರಿಸುವ ವಾಹನಗಳು ಹಾಳಾಗಿ ಗ್ಯಾರೇಜ್ ಸೇರುತ್ತಿವೆ.

ರಸ್ತೆ ದುರಸ್ತಿಗೆ ಮುಂದಾಗದ ಅಧಿಕಾರಿಗಳು: ಪ್ರವಾಹ ಕಡಿಮೆಯಾಗಿ ಅನೇಕ ದಿನಗಳು ಕೂಡ ಯಾವೊಬ್ಬ ಕಳೆದರೂ ಜನಪ್ರತಿನಿಧಿಗಳು ಕೊಚ್ಚಿ ಹೋದ ರಸ್ತೆ ದುರಸ್ತಿಗೆ ಮುಂದಾಗದಿರುವುದು ಅವರ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ ಎನ್ನುತ್ತಾರೆ ಸ್ಥಳೀಯರು.

ರಸ್ತೆಯ ಎರಡೂ ಬದಿ ಬೆಳೆದ ಮುಳ್ಳುಕಂಟಿ: ಪಟ್ಟಣದ ಸೇರಿ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಯ ಪಕ್ಕದಲ್ಲಿ ಗಿಡಗಂಟಿಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದು, ವಾಹನ ಸವಾರರಿಗೆ ಅಡೆತಡೆ ಆಗುತ್ತ, ಅಪಘಾತಕ್ಕೆ ಕಾರಣವಾಗುತ್ತಿದೆ.

ರಸ್ತೆಗಳ ಎರಡೂ ಬದಿಗಳಲ್ಲಿ ಹಲವು ತಿಂಗಳಿನಿಂದ ಮುಳ್ಳು ಕಂಟಿಗಳು ಎತ್ತರಕ್ಕೆ ಬೆಳೆದಿದ್ದು ವಾಹನ ಚಾಲಕರು ಪರದಾಡುತ್ತಿದ್ದಾರೆ. ಭಾಲ್ಕಿ ತಾಲ್ಲೂಕಿನ ಅಳವಾಯಿ, ಮೇಹಕರ, ವಾಂಝರಖೆಡಾ, ಸಾಯಗಾಂವ ಮಾರ್ಗವಾಗಿ ಪಟ್ಟಣಕ್ಕೆ ಬರುವ ರಸ್ತೆ, ಪಟ್ಟಣದಿಂದ ಕೊಂಗಳಿ ಗ್ರಾಮಕ್ಕೆ ಹೋಗುವ ರಸ್ತೆ, ಪಟ್ಟಣದಿಂದ ದೇವನಾಳ ಮಾರ್ಗವಾಗಿ ಮಾಚನಾಳ ಹೋಗುವ ರಸ್ತೆ, ಹಾಲಹಳ್ಳಿ ಗ್ರಾಮದಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಶ್ರಿಮಾಳಿದಿಂದ ಮೇಹಕರ ಮಾರ್ಗವಾಗಿ ಕೆಸರ ಜವಳಗಾ ಗ್ರಾಮಕ್ಕೆ ಹೋಗುವ ರಸ್ತೆಗಳು ತಿರುವು ಮುರುವುಗಳಿಂದ ಕೂಡಿದ್ದು, ರಸ್ತೆಯ ಎರಡೂ ಬದಿಗೆ ಹುಲುಸಾಗಿ ಬೆಳೆದಿರುವ ಗಿಡಗಂಟಿಗಳಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ.

ತಿರುವು ರಸ್ತೆಯಲ್ಲಿ ಎದುರಿನಿಂದ ಬರುವ ವಾಹನಗಳು ಕಾಣುತ್ತಿಲ್ಲ. ಇದರಿಂದ ಬೈಕ್ ಸವಾರರಿಗೆ ಅಪಘಾತಗಳಾಗುತ್ತಿವೆ ಎಂದು ವಾಹನಗಳ ಚಾಲಕರು ತಿಳಿಸಿದರು. ಮೊದಲೇ ಕಿರಿದಾದ ರಸ್ತೆಗಳಿದ್ದು ಅವುಗಳ ಬದಿಗಳಲ್ಲಿ ಹುಲ್ಲು ಕಂಟಿ ಬೆಳೆದಿರುವುದರಿಂದ ಸಂಚಾರಕ್ಕೆ ವ್ಯತ್ಯಯವಾಗುತ್ತಿದೆ. ರಸ್ತೆಯ ಶೇ 40 ಭಾಗ ಹುಲ್ಲುಕಂಟಿಗಳಲ್ಲಿ ಮುಚ್ಚಿದೆ.

ಮಳೆಯಾದರೂ ಬೈಕ್ ಸವಾರರು ಸಂಚರಿಸುವಾಗ ಮೈ ತುಂಬ ಕೊಳಚೆ ನೀರಿನ ಸ್ನಾನ ಸಿಡಿಯುತ್ತದೆ. ರಾತ್ರಿ ಸಮಯದಲ್ಲಿ ರಸ್ತೆ ಮೇಲೆ ಹುಲ್ಲು ಕಂಟಿಗಳಿಂದ ವಿಷಜಂತುಗಳು ಓಡಾಡುತ್ತಿರುವುದರಿಂದ ಪ್ರಯಾಣಿಕರು ಆತಂಕದಲ್ಲೇ ಸಂಚಾರ ಮಾಡುವಂತಾಗಿದೆ.

ರಸ್ತೆಗಳು ಸಾರ್ವಜನಿಕ ಆಸ್ತಿಗಳಾಗಿದ್ದು, ಅವುಗಳು ವ್ಯವಸ್ಥಿತಾಗಿ ಇರುವಂತೆ ನೋಡಿಕೊಳ್ಳಬೇಕಾದದ್ದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಕರ್ತವ್ಯ ಕಾರಣ ತಕ್ಷಣ ಎಚ್ಚೆತ್ತು ರಸ್ತೆ ಪಕ್ಕದ ಹುಲ್ಲು ಕಂಟಿಗಳು ತೆಗೆದು ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಜಿತ ಸೂರ್ಯವಂಶಿ ಆಗ್ರಹಿಸಿದ್ದಾರೆ.

ರಸ್ತೆ ಸಂಪರ್ಕ ಕಡಿತಗೊಂಡಿದ್ದು ರೈತರಿಗೆ ಜನರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಶೀಘ್ರ ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ರಸ್ತೆ ದುರಸ್ತಿಗೊಳಿಸಿ ಅನುಕೂಲ ಮಾಡಬೇಕು
ಬಾಲಾಜಿ ಪಾಟೀಲ ಕೊಂಗಳಿ ಗ್ರಾಮಸ್ಥ

ಪ್ರವಾಹ ಬಂದು ಹೋಗಿ ಸುಮಾರು ಹದಿನೈದು ದಿನಗಳು ಕಳೆದರೂ ರಸ್ತೆ ದುರಸ್ತಿಗೆ ಅಧಿಕಾರಿಗಳು ಮುಂದಾಗಿಲ್ಲ. ಶೀಘ್ರ ಸಂಬಂಧಿಸಿದ ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು
ನಾಗೇಶ ಚೌರೆ ಸಾಮಾಜಿಕ ಕಾರ್ಯಕರ್ತ

ಹುಲಸೂರ ತಾಲ್ಲೂಕಿನಲ್ಲಿ ಮಳೆಯಿಂದ ಹಾನಿಯಾದ ರಸ್ತೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟೂ ಬೇಗ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು
ಶರಣು ಸಲಗರ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.