ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ಅಕಾಡೆಮಿ ಪ್ರಶಸ್ತಿ: 30 ಕಲಾವಿದರು, ಇಬ್ಬರು ಕಲಾತಜ್ಞರಿಗೆ ಪ್ರಶಸ್ತಿ

ಡಿ.26, 27ರಂದು ಬೀದರ್‌ನಲ್ಲಿ ಪ್ರಶಸ್ತಿ ಪ್ರದಾನ
Last Updated 9 ಡಿಸೆಂಬರ್ 2018, 20:30 IST
ಅಕ್ಷರ ಗಾತ್ರ

ಬೀದರ್: ‘ಕರ್ನಾಟಕ ಜಾನಪದ ಅಕಾಡೆಮಿಯ 2018ನೇ ಸಾಲಿನ ಪ್ರಶಸ್ತಿ ಪ್ರಕಟವಾಗಿದ್ದು, ಪ್ರಶಸ್ತಿಗೆ 30 ಕಲಾವಿದರು ಹಾಗೂ ಇಬ್ಬರು ಜಾನಪದ ತಜ್ಞರನ್ನು ಆಯ್ಕೆ ಮಾಡಲಾಗಿದೆ.

‘ಕಲಾವಿದರ ಪ್ರಶಸ್ತಿ ₹ 25 ಸಾವಿರ ಹಾಗೂ ಜಾನಪದ ತಜ್ಞರ ಪ್ರಶಸ್ತಿ ₹50 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಹೊಂದಿದೆ. ಡಿ.26 ಹಾಗೂ 27 ರಂದು ಬೀದರ್‌ನಲ್ಲಿ ಆಯೋಜಸಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಭಾನುವಾರ ತಿಳಿಸಿದರು.

ಪ್ರಶಸ್ತಿ ಪುರಸ್ಕೃತ ಪಟ್ಟಿ:

ಬೆಂಗಳೂರಿನ ಯಲ್ಲಮ್ಮ ವೆಂಕಟರಾಮಯ್ಯ (ಸಂಪ್ರದಾಯದ ಪದ), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುನಿ ನರಸಮ್ಮ (ಸೋಬಾನೆ ಪದ), ರಾಮನಗರ ಜಿಲ್ಲೆಯ ತಿಗಳರಹೊಸಹಳ್ಳಿ ಮುನಿಚೂಡಯ್ಯ (ತಮಟೆ ವಾದನ), ಕೋಲಾರ ಜಿಲ್ಲೆಯ ಬ್ಯಾಟಮ್ಮ ಗುಂಡ್ಲುಪಾಳ್ಯ (ಜನಪದ ವೈದ್ಯೆ), ಚಿಕ್ಕಬಳ್ಳಾಪುರ ಜಿಲ್ಲೆಯ ಬೊಮ್ಮೆಯ್ಯಗಾರಿಪಲ್ಲಿಯ ನರಸಿಂಹಯ್ಯ (ಚೆಕ್ಕೆ ಭಜನೆ), ತುಮಕೂರು ಜಿಲ್ಲೆಯ ಕೆಂಚನಹಳ್ಳಿಯ ಲಕ್ಷಮ್ಮ ನರಸಯ್ಯ(ಜುಂಜನಪ್ಪ ಕಾವ್ಯ), ದಾವಣಗೆರೆ ಜಿಲ್ಲೆಯ ಕತ್ತಿಗೆ ಗ್ರಾಮದ ಪುಟ್ಟಮಲ್ಲಪ್ಪ ಮಾಳನಾಯಕರ (ನಾಟಿ ವೈದ್ಯ).

ಚಿತ್ರದುರ್ಗ ಜಿಲ್ಲೆಯ ಸೊಂಡೆಕೊಳದ ಎಸ್.ರೇವಣಸಿದ್ದಪ್ಪ (ಭಜನೆ ಪದ), ಶಿವಮೊಗ್ಗ ಜಿಲ್ಲೆಯ ಹೆಚ್ಚೆ ಗ್ರಾಮದ ಕರಡಿ ಲಕ್ಷ್ಮಣಪ್ಪ (ಭಜನೆ ಪದ), ಹಾಸನ ಜಿಲ್ಲೆಯ ಕರೇಹಳ್ಳಿಯ ಚಂದ್ರಾಬಾಯಿ ಗುಂಡಾನಾಯಕ (ಲಂಬಾಣಿ ಹಾಡು), ಚಾಮರಾಜನಗರ ಜಿಲ್ಲೆಯ ಭರೈನತ್ತ ಗ್ರಾಮದ ಮರಿಸಿದ್ದಮ್ಮ (ಮಂಟೇಸ್ವಾಮಿ ಕಾವ್ಯ), ಚಿಕ್ಕಮಗಳೂರು ಜಿಲ್ಲೆಯ ಗೌರಾಪುರದ ಜಿ.ವಿ.ಕೊಟ್ರೇಶಪ್ಪ (ವೀರಗಾಸೆ ನೃತ್ಯ), ಮೈಸೂರಿನ ಅಂಗವಿಕಲ ನಾಗರಾಜು (ನಗಾರಿ ವಾದನ), ಮಂಡ್ಯ ಜಿಲ್ಲೆಯ ತಳಗವಾಡಿಯ ಸಿದ್ದಯ್ಯ (ಕೋಲಾಟ), ದಕ್ಷಿಣಕನ್ನಡದ ಯಮುನಾ (ಭೂತಾರಾಧನೆ), ಉಡುಪಿ ಜಿಲ್ಲೆಯ ವಂತಿಬೆಟ್ಟು ಹಿರಿಯಡ್ಕದ ಅಮ್ಮಣ್ಣಿ ಡಂಗು ಪಾಣಾರ (ಪಾಡ್ದಾನ).

ಕೊಡಗು ಜಿಲ್ಲೆಯ ಯವಕಪಾಡಿಯ ಜಾನಕಿ ತಮ್ಮಯ್ಯ(ದುಡಿಪಾಟ್), ಕಲಬುರ್ಗಿ ಜಿಲ್ಲೆ ಅತ್ತರಗಿ ಗ್ರಾಮದ ಮಹಾದೇವಿ ಶಾಂತಪ್ಪ (ಸಂಪ್ರಾದಯ ಪದ), ಕೊಪ್ಪಳ ಜಿಲ್ಲೆಯ ಹಾಬಲಕಟ್ಟಿಯ ದಾವಲ್‌ಸಾಬ ಆತ್ತಾರ (ರಿವಾಯತ್ ಪದ), ರಾಯಚೂರಿನ ಶರಣಪ್ಪ ಗೋನಾಳ (ಜಾನಪದ ಗೀತೆ), ಬೀದರ್ ಜಿಲ್ಲೆ ಔರಾದ್‌ ತಾಲ್ಲೂಕಿನ ನಾಗೂರಿನ ತುಳಸಮ್ಮ (ತತ್ವಪದ ಗಾಯನ), ಬಳ್ಳಾರಿ ಜಿಲ್ಲೆ ಸೋವೆನಹಳ್ಳಿಯ ಸೋವೇನಹಳ್ಳಿ ಬಸಣ್ಣ (ಸೋಬಾನೆ ಪದ), ಯಾದಗಿರಿ ಜಿಲ್ಲೆಯ ಸುರಪುರದ ಬಿ.ಲಕ್ಷ್ಮಣ ಗುತ್ತೇದಾರ (ದುಂದುಮೆ ಹಾಡು), ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಬಂಬಲವಾಡದ ಭರಮಪ್ಪ ರಾಮಪ್ಪ (ಶಹನಾಯ್ ವಾದನ), ಧಾರವಾಡ ಜಿಲ್ಲೆ ದೇವಗಿರಿಯ ಲಕ್ಷ್ಮೀಬಾಯಿ ಕಾಳೆ (ಜಾನಪದ ಗಾಯನ), ವಿಜಯಪುರ ಜಿಲ್ಲೆ ಕಾಖಂಡಕಿಯ ಚಿನ್ನಪ್ಪ ಗಿರಿಮಲ್ಲಪ್ಪ ಪೂಜಾರಿ (ಸಂಬಾಳ ವಾದನ), ಬಾಗಲಕೋಟೆ ಜಿಲ್ಲೆಯ ತೇರದಾಳದ ಮಲ್ಲಪ್ಪ ಬಾಳಪ್ಪ ಹೂಗಾರ (ಕರಡಿ ಸಂಬಾಳ), ಉತ್ತರಕನ್ನಡ ಜಿಲ್ಲೆ ಬೇಲೆಕೇರಿಯ ಖೇಮು ತುಳಸುಗೌಡ (ಹಾಲಕ್ಕಿ ಸುಗ್ಗಿ ಕುಣಿತ), ಹಾವೇರಿ ಜಿಲ್ಲೆ ಇನಾಮಯಲ್ಲಾಪುರದ ಬಡವಪ್ಪ ಆನವಟ್ಟಿ (ಡೊಳ್ಳಿನ ಪದ), ಗದಗ ಜಿಲ್ಲೆಯ ಕೊತಬಾಳದ ಬಸವ್ವ ಮಾದರ (ಮದುವೆ ಹಾಡುಗಳು).

ಜಾನಪದ ತಜ್ಞರು

ದಾವಣಗೆರೆಯ ಡಾ.ಮಲ್ಲಿಕಾರ್ಜುನ ಕಲಮರಳಿ ಅವರಿಗೆ ‘ಡಾ.ಜೀ.ಶಂ.ಪ. ತಜ್ಞನ ಪ್ರಶಸ್ತಿ’ ಹಾಗೂ ಉಡುಪಿಯ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರಿಗೆ ‘ಡಾ.ಬಿ.ಎಸ್.ಗದ್ದಗಿಮಠ ಪ್ರಶಸ್ತಿ’ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT