ಜನವಾಡ: ಬೆಂಗಳೂರಿನ ಸುದೀಪ್ ಫ್ಯಾನ್ಸ್ ಅಸೋಸಿಯೇಶನ್ಗೆ ಕರೆ ಮಾಡಿ ತನ್ನ ಸಂಕಟ ಹೇಳಿಕೊಂಡ ಚಿತ್ರನಟ ಸುದೀಪ್ ಅಭಿಮಾನಿಯೊಬ್ಬರ ಮನೆ ಬಾಗಿಲಿಗೆ ಆಹಾರಧಾನ್ಯ ಕಿಟ್ ತಲುಪಿದೆ.

ಲಾಕ್ಡೌನ್ ಕಾರಣ ಸದ್ಯ ಚಟ್ನಳ್ಳಿಯ ತನ್ನ ಪತ್ನಿಯ ಮನೆಯಲ್ಲಿ ವಾಸವಾಗಿರುವ ಮೂಲತಃ ಚಿಟಗುಪ್ಪ ತಾಲ್ಲೂಕಿನ ಬೋರಾಳದ ಗೌತಮ ದೊಡ್ಡಿ ಅವರಿಗೆ ಬೀದರ್ನ ಆಲ್ ಇಂಡಿಯಾ ಬಾದಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಶನ್ ಅಧ್ಯಕ್ಷ ಸುನೀಲ್ ಅವರ ನೇತೃತ್ವದಲ್ಲಿ ಸುದೀಪ್ ಅಭಿಮಾನಿಗಳು ಒಂದು ತಿಂಗಳಿಗೆ ಆಗುವಷ್ಟು ಆಹಾರ ಸಾಮಗ್ರಿಗಳನ್ನು ತಲುಪಿಸಿದ್ದಾರೆ.

‘ಲಾಕ್ಡೌನ್ ಪ್ರಯುಕ್ತ ಮಾಡಲು ಕೆಲಸ ಇಲ್ಲ. ಬಹಳ ತೊಂದರೆಯಲ್ಲಿದ್ದೇನೆ. ಏನಾದರೂ ಸಹಾಯ ಮಾಡಿ ಎಂದು ಬೆಂಗಳೂರಿನ ಸುದೀಪ್ ಫ್ಯಾನ್ಸ್ ಅಸೋಸಿಯೇಶನ್ ರಾಷ್ಟ್ರೀಯ ಅಧ್ಯಕ್ಷ ನವೀನ್ ಗೌಡ ಅವರಿಗೆ ಕರೆ ಮಾಡಿ ಮನವಿ ಮಾಡಿದ್ದೆ. ಅವರು ತಕ್ಷಣ ಬೀದರ್ನ ಆಲ್ ಇಂಡಿಯಾ ಬಾದಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಶನ್ಗೆ ನೆರವಾಗಲು ಸೂಚನೆ ನೀಡಿದರು’ ಎಂದು ಗೌತಮ ತಿಳಿಸಿದರು.

‘ಅಸೋಸಿಯೇಶನ್ನವರು ಅಕ್ಕಿ, ಚಣಗಿ ಬೇಳೆ, ಖಾರದ ಪುಡಿ, ಸಿಹಿ ಎಣ್ಣೆ, ಚಹಾಪುಡಿ, ವಾಷಿಂಗ್ ಪೌಡರ್, ಸಾಬೂನು, ಕೊಬ್ಬರಿ ಎಣ್ಣೆ, ಗುಡ್ನೈಟ್, ಬಿಸ್ಕತ್, ಅವಲಕ್ಕಿ, ತರಕಾರಿ ಸೇರಿದಂತೆ ವಿವಿಧ ಆಹಾರ ಸಾಮಗ್ರಿಗಳನ್ನು ಪೂರೈಸಿದ್ದಾರೆ. ಕಷ್ಟದ ಕಾಲದಲ್ಲಿ ಅಸೋಸಿಯೇಶನ್ ನೆರವಾಗಿದ್ದಕ್ಕೆ ಸಂತಸವಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.