ಕುರಿಗಾಹಿಗಳಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಹೇಳುತ್ತಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೇಕ ಸಲ ಕುರಿಗಾಹಿಗಳಿಗೆ ಅಭಯ ನೀಡುವ ಮಾತನಾಡಿದ್ದಾರೆ. ಈಗ ದನಕರುಗಳ ಜೊತೆಗೆ ಕುರಿ, ಮೇಕೆಗಳಿಗೂ ಅರಣ್ಯದೊಳಗೆ ಎಂಟ್ರಿಗೆ ಬ್ಯಾನ್ ಮಾಡಿರುವುದು ಈ ಕಸುಬು ನಂಬಿದವರಿಗೆ ಆಘಾತ ನೀಡಿದೆ. ಸರ್ಕಾರ ತಕ್ಷಣ ಈ ಆದೇಶ ಹಿಂಪಡೆದು ಬಡವರಲ್ಲಿ ಮನೆ ಮಾಡಿದ ಆತಂಕ ನಿವಾರಿಸಬೇಕು.