ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ, ಅಹಿಂಸೆ ಪ್ರತಿಪಾದಿಸಿದ ಮಹಾತ್ಮ: ಗೋಪಿಕೃಷ್ಣ

ಕಮಲನಗರ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿ ಆಚರಣೆ
Last Updated 6 ಅಕ್ಟೋಬರ್ 2021, 3:17 IST
ಅಕ್ಷರ ಗಾತ್ರ

ಕಮಲನಗರ: ಶಾಂತಿ, ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಯುಗಪುರುಷ ಮಹಾತ್ಮ ಗಾಂಧೀಜಿ ಎಂದು ಕಾಂಗ್ರೆಸ್ ಪಕ್ಷದ ಔರಾದ್ ತಾಲ್ಲೂಕು ಘಟಕದ ಉಸ್ತುವಾರಿ ಗೋಪಿಕೃಷ್ಣ ಹೇಳಿದರು.

ತಾಲ್ಲೂಕಿನ ಡಿಗ್ಗಿ ಗ್ರಾಮದಲ್ಲಿ ಮಂಗಳವಾರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ 75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಅಕ್ಟೋಬರ್ 28ರವರೆಗೆ ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ 153ನೇ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಸಮಾಜ ಸುಧಾರಕರಾಗಿ ಗಾಂಧೀಜಿಯವರ ತತ್ವ, ಆದರ್ಶಗಳು ಸದಾ ಪ್ರಸ್ತುತವಾಗಿವೆ. ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಗಾಂಧೀಜಿ ಜಾರಿಗೆ ತರಲು ಶ್ರಮಿಸಿದ್ದರು ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ ಕದಂ ಮಾತನಾಡಿ, ಮಹಾತ್ಮಾ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ ಗಾಂಧಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಹೀಗಾಗಿ ಅವರ ಸಂದೇಶಗಳನ್ನು ತಾಲ್ಲೂಕಿನ 39 ಗ್ರಾಮ ಪಂಚಾಯಿತಿಗಳಲ್ಲಿ ‘ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಸಂಕಲ್ಪ’ ಕಾರ್ಯಕ್ರಮದ ಮೂಲಕ ಜನರ ಮನೆ ಬಾಗಿಲಿಗೆ ಮುಟ್ಟುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ತಾಲ್ಲೂಕು ಬ್ಲಾಕ್ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರಾಜಕುಮಾರ ಹಲಬುರ್ಗೆ ಮಾತನಾಡಿ, ಅಕ್ಟೋಬರ್ 28ರವರೆಗೆ ಕಾಂಗ್ರೆಸ್‍ನಿಂದ ಔರಾದ್ ತಾಲ್ಲೂಕಿನ 21 ಗ್ರಾಮ ಪಂಚಾಯಿತಿ ಮತ್ತು ಕಮಲನಗರ ತಾಲ್ಲೂಕಿನ 18 ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಭಾರತದ ಸ್ವಾತಂತ್ರ್ಯದಲ್ಲಿ ಮಹಾತ್ಮಾ ಗಾಂಧೀಜಿಯವರ ಕೊಡುಗೆ ಮತ್ತು ಪಾತ್ರ ಹಾಗೂ ಕಾಂಗ್ರೆಸ್ ಸಂಘಟನೆಗಾಗಿ ಇಂದಿರಾಗಾಂಧಿ, ರಾಜೀವಗಾಂಧಿ ಅವರ ಕೊಡುಗೆ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಬಿ. ಕನಿರಾಮ ರಾಠೋಡ್, ಕಾಂಗ್ರೆಸ್ ತಾಲ್ಲೂಕು ಘಟಕ ಅಧ್ಯಕ್ಷ ಆನಂದ ಚವಾಣ್, ತಾಪಂ ಉಪಾಧ್ಯಕ್ಷ ನೆಹರು ಪಾಟೀಲ, ತೋರಣಾ ಪ್ರಕಾಶ ಪಾಟೀಲ, ರಾಮಣ್ಣ ಒಡೆಯರ್, ಅಪ್ಪಸಾಬ್ ದೇಶಮುಖ, ವೆಂಕಟ ಸಿಂಧೆ, ಮಡಿವಾಳಪ್ಪ ಬಿರಾದಾರ, ಶಿವಶಂಕರ ರಾಂಪುರೆ, ಉಮಾಕಾಂತ ಪಾಟೀಲ, ಸೂರ್ಯಕಾಂತ , ಸತೀಷ ರಾಂಪುರೆ, ಯುವರಾಜ ರಾಂಪುರೆ, ಮಹಾದೇವ ಸ್ವಾಮಿ, ಕಲ್ಯಾಣರಾವ ಚ್ಯಾಂಡೇಶ್ವರೆ, ಶಿವರಾಜ ಶ್ರೀಗಿರೆ, ಇಸ್ಮಾಯಿಲ್ ಖತಗಾಂವ್, ಶಾಂತಕುಮಾರ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT