ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಶತಕ ಬಾರಿಸಿದ ಬೆಳ್ಳುಳ್ಳಿ

ಏರಿದ ಈರುಳ್ಳಿ, ಬೆಂಡಾದ ಬೆಂಡೆಕಾಯಿ
Last Updated 24 ಮಾರ್ಚ್ 2023, 22:30 IST
ಅಕ್ಷರ ಗಾತ್ರ

ಬೀದರ್: ಈಚೆಗೆ ಸುರಿದ ಆಲಿಕಲ್ಲು ಮಳೆಗೆ ಟೊಮೆಟೊ, ಬದನೆಕಾಯಿ, ಉದ್ದ ಕುಂಬಳಕಾಯಿಗೆ ಹಾನಿ ಉಂಟು ಮಾಡಿದೆ. ಹಾನಿ ಪ್ರಮಾಣ ಕಡಿಮೆ ಮಾಡಿಕೊಳ್ಳಲು ರೈತರು ಅಧಿಕ ಪ್ರಮಾಣದಲ್ಲಿ ತರಕಾರಿಗಳನ್ನು ಮಾರುಕಟ್ಟೆಗೆ ತಂದ ಕಾರಣ ಕೆಲ ತರಕಾರಿಗಳ ಬೆಲೆ ಕುಸಿದಿದೆ.

ಕಳೆದ ವಾರ ಪ್ರತಿ ಕೆ.ಜಿಗೆ ₹ 60ರಂತೆ ಮಾರಾಟವಾಗಿದ್ದ ಬೆಳ್ಳುಳ್ಳಿ ಈ ವಾರ ಶತಕ ಬಾರಿಸಿದೆ. ಪ್ರತಿ ಕ್ವಿಂಟಲ್‌ಗೆ ಬೆಳ್ಳುಳ್ಳಿ ₹ 4 ಸಾವಿರ ಹಾಗೂ ಈರುಳ್ಳಿ ₹ 5 ಸಾವಿರ ಹೆಚ್ಚಾಗಿದೆ. ಕೊತಂಬರಿ, ಮೆಂತೆ ಸೊಪ್ಪಿನ ಬೆಲೆಯಲ್ಲಿ ₹ 1 ಸಾವಿರ ಏರಿಕೆಯಾಗಿದೆ

ಆಲೂಗಡ್ಡೆ, ಮೆಣಸಿನಕಾಯಿ, ಡೊಣಮೆಣಸಿನ ಕಾಯಿ, ಎಲೆಕೋಸು, ಗಜ್ಜರಿ, ಬೀನ್, ಟೊಮೆಟೊ, ತುಪ್ಪದ ಹಿರೇಕಾಯಿ, ಸಬ್ಬಸಗಿ ಹಾತೂ ಪಾಲಕ್ ಬೆಲೆ ಸ್ಥಿರವಾಗಿದೆ.

ಬೆಂಡೆಕಾಯಿ, ಕರಿಬೇವು ₹ 4 ಸಾವಿರ, ಹಿರೇಕಾಯಿ ₹ 2 ಸಾವಿರ, ಹೂಕೋಸು, ಬದನೆಕಾಯಿ, ನುಗ್ಗೆಕಾಯಿ, ಚವಳೆಕಾಯಿ ಹಾಗೂ ಸೌತೆಕಾಯಿ ಬೆಲೆ ₹ 1 ಸಾವಿರ ಕಡಿಮೆಯಾಗಿದೆ.

ಮಹಾರಾಷ್ಟ್ರದ ನಾಸಿಕ್, ಸೋಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ ಆವಕವಾಗಿದೆ. ಹೈದರಾಬಾದ್‌ನಿಂದ ಬೀನ್ಸ್, ಬೀಟ್‌ರೂಟ್‌, ಗಜ್ಜರಿ, ನುಗ್ಗೆಕಾಯಿ, ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಬೆಂಡೆಕಾಯಿ, ಚವಳೆಕಾಯಿ, ಪಡವಲಕಾಯಿ, ಹಾಗಲಕಾಯಿ, ಬೆಳಗಾವಿಯಿಂದ ಹಸಿ ಮೆಣಸಿನಕಾಯಿ ಹಾಗೂ ಕೊತಂಬರಿ ನಗರದ ಮಾರುಕಟ್ಟೆಗೆ ಬಂದಿದೆ.

‘ಭಾಲ್ಕಿ, ಚಿಟಗುಪ್ಪ ಹಾಗೂ ಬೀದರ್‌ ತಾಲ್ಲೂಕಿನಿಂದ ಬದನೆಕಾಯಿ, ಹೂಕೋಸು, ಎಲೆಕೋಸು, ಮೆಂತೆ ಹಾಗೂ ಸಬ್ಬಸಗಿ ಸೊಪ್ಪು ನಗರದ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ. ಆಲಿಕಾಲು ಮಳೆಯಿಂದಾಗಿ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ. ಅಧಿಕ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿರುವ ಕಾರಣ ಕೆಲ ತರಕಾರಿ ಬೆಲೆ ಕಡಿಮೆಯಾಗಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

.....................................................................

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
........................................................................
ತರಕಾರಿ;ಕಳೆದ ವಾರ; ಈ ವಾರ (ಪ್ರತಿ ಕೆ.ಜಿಗೆ ₹ಗಳಲ್ಲಿ)

.......................................................................
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ, ಈ ವಾರ
.......................................................................
ಈರುಳ್ಳಿ 5-10; 10-15
ಬೆಳ್ಳುಳ್ಳಿ 50-60; 80-100
ಆಲೂಗಡ್ಡೆ 10-20; 10-20
ಮೆಣಸಿನಕಾಯಿ 60-80; 60-80
ಎಲೆಕೋಸು 10-20; 15-20
ಹೂಕೋಸು 30-40; 20-30
ಗಜ್ಜರಿ 30-40; 30-40
ಬೀನ್ಸ್ 60-80; 70-80
ಟೊಮೆಟೊ 10-20; 10-20

ಬದನೆಕಾಯಿ 30-40; 20-30
ಬೆಂಡೆಕಾಯಿ 100-120; 70-80
ಹಿರೇಕಾಯಿ 60-80; 50-60
ನುಗ್ಗೆಕಾಯಿ 60-80; 60-70

ಡೊಣಮೆಣಸಿನ ಕಾಯಿ 50-60; 50-60
ಚವಳೆಕಾಯಿ 60-80; 60-70
ಸೌತೆಕಾಯಿ 30-40; 20-30
ತುಪ್ಪದ ಹಿರೇಕಾಯಿ 60-80; 60-80

ಮೆಂತೆ 20-30; 30-40
ಸಬ್ಬಸಗಿ 60-80; 60-80
ಕರಿಬೇವು 100-120; 80-90
ಕೊತಂಬರಿ 10-20; 20-30
ಪಾಲಕ್ 30-40; 30-40

* * * *

ಬೀದರ್‌ ಪೇಟೆ ಧಾರಣಿ
ಉತ್ಪನ್ನ; ಕನಿಷ್ಠ; ಗರಿಷ್ಠ (ಪ್ರತಿ ಕ್ವಿಂಟಲ್‌ ₹ಗಳಲ್ಲಿ)

.....................................................
ಕಡಲೆ ಕಾಳು – 3,810; 4,770
ಅವರೆಕಾಯಿ - 4,400; 5,800
ಜೋಳ 3,000; 4,400
ನುಚ್ಚು ಅಕ್ಕಿ 2,400; 2,800

ಅಕ್ಕಿ 4,400; 5,800
ಸೋಯಾಬಿನ್ 4,750; 5,240
ಗೋಧಿ 2,300; 3,300
ಕುಸುಬೆ 4,450; 4,700

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT