ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಉತ್ತಮ ಮಳೆ; ಮುಂಗಾರು ಬಿತ್ತನೆ ಆರಂಭ

Published 12 ಜೂನ್ 2023, 14:46 IST
Last Updated 12 ಜೂನ್ 2023, 14:46 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಹೋಬಳಿಯಾದ್ಯಂತ ಕೆಲ ದಿನಗಳಿಂದ ಉತ್ತಮ ಮಳೆಯಾಗಿದ್ದರಿಂದ ರೈತರು ಮುಂಗಾರು ಬಿತ್ತನೆ ಆರಂಭಿಸಿದ್ದಾರೆ.

ಪ್ರಸಕ್ತ ಸಾಲಿನ ಮೃಗಶಿರ ಮಳೆ ನಿಗದಿತ ಸಮಯಕ್ಕೆ ಆಗುತ್ತಿರುವುದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಈಗಾಗಲೇ ರೈತರು ಕಳೆದ ಹದಿನೈದು ದಿನಗಳ ಹಿಂದೆಯೇ ಭೂಮಿ ಹದ ಮಾಡಿದ್ದಾರೆ. ಬಿತ್ತನೆಗೆ ಬೇಕಾದ ಪರಿಕರಗಳನ್ನು ದುರಸ್ತಿ ಮಾಡಿಸಿದ್ದರು. ಬೀಜ , ರಸಗೊಬ್ಬರ ಸಂಗ್ರಹಿಸಿಕೊಂಡಿದ್ದರು. ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು ರೈತರು ಬಿತ್ತನೆ ಆರಂಭಿಸಿದ್ದಾರೆ.

ಹೋಬಳಿಯ ಚಳಕಾಪುರ, ಚಳಕಾಪುರವಾಡಿ, ಡಾವರಗಾಂವ್ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಸೋಮವಾರ ಬಿತ್ತನೆ ಮಾಡುತ್ತಿರುವುದು ಅಲ್ಲಲ್ಲಿ ಕಂಡು ಬಂತು. ಕೆಲವು ರೈತರು ತೊಗರಿ ಸಾಲಿನಲ್ಲಿ ಉದ್ದು , ಹೆಸರು ಬಿತ್ತನೆ ಮಾಡುತ್ತಿರುವುದು ಸಹ ಕಂಡು ಬಂತು.

ಸದ್ಯ ಮುಂಗಾರು ಬಿತ್ತನೆಗೆ ಸೂಕ್ತವಾದ ಸಮಯವಿದಾಗಿದೆ. ಅಲ್ಲದೇ ಮಳೆಯು ಉತ್ತಮವಾಗಿ ಬೀಳುತ್ತಿದೆ. ಇವಾಗ ಭೂಮಿಗೆ ಬೀಜ ಬಿದ್ದರೆ ಇಳುವರಿ ಚೆನ್ನಾಗಿ ಬರುತ್ತದೆ ಮತ್ತು ಬೆಳೆಗಳಿಗೆ ಯಾವುದೇ ರೀತಿಯ ರೋಗ ತಗುಲುವುದಿಲ್ಲ ಎಂಬ ನಂಬಿಕೆ ರೈತರದ್ದಾಗಿದೆ’ ಎಂದು ಹಿರಿಯರಾದ ಧನರಾಜ ಮುತ್ತಂಗೆ ತಿಳಿಸಿದ್ದಾರೆ.

ಖಟಕಚಿಂಚೋಳಿ ಹೋಬಳಿಯ ಚಳಕಾಪುರ ವಾಡಿ ಗ್ರಾಮದಲ್ಲಿ ಸೋಮವಾರ ರೈತರು ಬಿತ್ತನೆಯಲ್ಲಿ ತೋಡಗಿರುವುದು ಕಂಡುಬಂತು
ಖಟಕಚಿಂಚೋಳಿ ಹೋಬಳಿಯ ಚಳಕಾಪುರ ವಾಡಿ ಗ್ರಾಮದಲ್ಲಿ ಸೋಮವಾರ ರೈತರು ಬಿತ್ತನೆಯಲ್ಲಿ ತೋಡಗಿರುವುದು ಕಂಡುಬಂತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT