ಬುಧವಾರ, ಜನವರಿ 22, 2020
27 °C

ಡಿಸೆಂಬರ್ 15 ರಿಂದ ಹಜರತ್ ಸೈಯದ್ ಪಾಷ ದರ್ಗಾ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯ ಗಡಿ ಭಾಗದಲ್ಲಿರುವ ಸಾಲೇಬೀರನಳ್ಳಿಯಲ್ಲಿ ಡಿಸೆಂಬರ್ 15 ರಿಂದ 17 ರ ವರೆಗೆ ಹಜರತ್ ಸೈಯದ್ ಪಾಷ ದರ್ಗಾದ ಜಾತ್ರಾ ಮಹೋತ್ಸವ ನಡೆಯಲಿದೆ.

15 ರಂದು ಗಂಧದ ಮೆರವಣಿಗೆ, 16 ರಂದು ದೀಪೋತ್ಸವ ಹಾಗೂ 17 ರಂದು ಕುಸ್ತಿ ಸ್ಪರ್ಧೆಗಳು ನಡೆಯಲಿವೆ.

ಹಜರತ್ ಸೈಯದ್ ಪಾಷ ದರ್ಗಾ ಹಿಂದೂ-ಮುಸ್ಲಿಂ ಭಾವೈಕ್ಯದ ಕೇಂದ್ರವಾಗಿದೆ. ರಾಜ್ಯದ ವಿವಿಧ ಜಿಲ್ಲೆ ಹಾಗೂ ನೆರೆ ರಾಜ್ಯಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ದರ್ಗಾಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಜಾತ್ರಾ ಮಹೋತ್ಸವವು ಭಕ್ತರ ಸಮಾಗಮಕ್ಕೆ ವೇದಿಕೆ ಒದಗಿಸುತ್ತದೆ.

ಈ ಬಾರಿಯ ಜಾತ್ರಾ ಮಹೋತ್ಸವ ಪ್ರಯುಕ್ತ ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ದರ್ಗಾದ ಮುತುವಲಿ ಸೈಯದ್ ರಸೂಲಸಾಬ್ ಇಸ್ಮಾಯಿಲ್‌ಸಾಬ್‌ ತಿಳಿಸಿದ್ದಾರೆ.

 

ಪ್ರತಿಕ್ರಿಯಿಸಿ (+)