ಗುರುವಾರ , ಜನವರಿ 23, 2020
29 °C

ಶೇ.40 ರಷ್ಟು ಜನರಿಗೆ ಹೃದ್ರೋಗ: ತಜ್ಞ ಡಾ.ಜಯಕೀರ್ತಿ ರಾವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘40 ವರ್ಷದೊಳಗಿನ ಶೇ 40ರಷ್ಟು ಜನರಿಗೆ ಹೃದ್ರೋಗ ಸಮಸ್ಯೆ ಇದೆ. ಆಧುನಿಕ ಜೀವನ ಶೈಲಿಯೇ ಇದಕ್ಕೆ ಕಾರಣವಾಗಿದೆ’ ಎಂದು ಹೈದರಾಬಾದ್‌ನ ಹೃದ್ರೋಗ ತಜ್ಞ ಡಾ.ಜಯಕೀರ್ತಿ ರಾವ್‌ ಹೇಳಿದರು.

‘ಆಹಾರ ಪದಾರ್ಥಗಳಲ್ಲಿನ ರಾಸಾಯನಿಕ ಅಂಶ, ಮದ್ಯ ಹಾಗೂ ಸಿಗರೇಟ್‌ ಸೇವನೆ ಹೃದಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇವುಗಳಿಂದ ದೂರ ಇರುವುದು ಒಳ್ಳೆಯದು’ ಎಂದು ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಇಂದಿನ ಯಾಂತ್ರಿಕ ಯುಗದಲ್ಲಿ ಒತ್ತಡ ಬದುಕಿನ ಭಾಗವಾಗಿ ಬಿಟ್ಟಿದೆ. ಧಾವಂತದ ಬದುಕು ಹಾಗೂ ಕೆಲಸದಲ್ಲಿನ ಒತ್ತಡವೂ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುವಂತೆ ಮಾಡುತ್ತಿದೆ. ನಿಯಮಿತವಾದ ವ್ಯಾಯಾಮ ಹಾಗೂ ಧ್ಯಾನದ ಮೂಲಕ ಒತ್ತಡ ನಿರ್ವಹಣೆ ಮಾಡಬಹುದು’ ಎಂದರು.

‘ಹೈದರಾಬಾದ್‌ನ ಕಾಂಟಿನೆಂಟಲ್‌ ಆಸ್ಪತ್ರೆ ದಕ್ಷಿಣ ಭಾರತದ ಕೆಲವೇ ಕೆಲವು ಹೃದ್ರೋಗ ಆಸ್ಪತ್ರೆಗಳಲ್ಲಿ ಗುರುತಿಸಿಕೊಂಡಿದೆ. ಮೂರು ವಿಧಗಳಲ್ಲಿ ಇಲ್ಲಿ ಚಿಕಿತ್ಸೆ ದೊರೆಯುತ್ತಿದೆ. ನೈರ್ಮಲ್ಯ ಹಾಗೂ ರೋಗಿಯ ವೈಯಕ್ತಿಕ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ಕೊಠಡಿಗೆ ಶೌಚಾಲಯದ ವ್ಯವಸ್ಥೆ ಹಾಗೂ ಶುಶ್ರೂಷಕರ ಸೇವೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

‘700 ಹಾಸಿಗೆಗಳ ಆಸ್ಪತ್ರೆಯಲ್ಲಿ ಸಕಲ ಸೌಲಭ್ಯಗಳು ಲಭ್ಯ ಇದೆ. ಬೀದರ್‌ ನಗರದಿಂದ ಕೇವಲ 140 ಕಿ.ಮೀ ಅಂತರದಲ್ಲಿ ಆಸ್ಪತ್ರೆ ಇದೆ. ಬೀದರ್‌ ಜಿಲ್ಲೆಯ ಜನರಿಗೆ ಸಮೀಪ ಹಾಗೂ ಹೆಚ್ಚು ಅನುಕೂಲಕರವಾಗಿದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು