ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೀರಭದ್ರೇಶ್ವರ ದೇಗುಲ ಅಭಿವೃದ್ಧಿಗೆ ಸಿದ್ಧ’

Last Updated 30 ನವೆಂಬರ್ 2020, 12:01 IST
ಅಕ್ಷರ ಗಾತ್ರ

ಚಿಟಗುಪ್ಪ: ತಾಲ್ಲೂಕಿನ ಚಾಂಗಲೇರಾ ವೀರಭದ್ರೇಶ್ವರ ದೇಗುಲದ ಪ್ರಗತಿಗೆ ಶ್ರಮಿಸುತ್ತೇನೆ. ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಅವುಗಳನ್ನು ಪೂರ್ಣಗೊಳಿಸಲು ಬೇಕಾದ ಅಗತ್ಯ ಹಣಕಾಸು ಒದಗಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.

ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ದೇಗುಲದ ಪದಾಧಿಕಾರಿಗಳ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯ ಕ್ಷೇತ್ರ ಚಾಂಗಲೇರಾವನ್ನ ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವನ್ನಾಗಿಸಲು ಯೋಜನೆ ರೂಪಿಸಲಾಗುತ್ತದೆ ಎಂದರು.

ದೇಗುಲದ ಅಧ್ಯಕ್ಷ ವಿಜಯಕುಮಾರ ವಾಲಿ, ಸದಸ್ಯರಾದ ನರೇಶ ತೊಂಟಿ, ರಾಮುಲು ಮಂತ್ರಿ, ಸಂಗಪ್ಪ ತೊಂಟಿ, ಸುಭಾಷ ಆರಡ್ಡಿ, ಜಗನ್ನಾಥ, ಈಶ್ವರ ಉಪ್ಪಾರ, ನರಸಪ್ಪ ಭುತಾಳಿ, ನೀಲಮ್ಮ ಜಗನ್ನಾಥ, ತಂಗೆಮ್ಮ ರವಿ, ಗಣ್ಯರಾದ ಈಶ್ವರ ಹುಗಾರ್, ಪಪ್ಪು ಸ್ವಾಮಿ, ರೇವಣಸಿದ್ದಯ್ಯ ಸ್ವಾಮಿ, ರಾಮಯ್ಯ ಸ್ವಾಮಿ, ಸುರೇಶ ಗೌಳಿ, ಗೌಡಪ್ಪ ಗೌಡ, ರಾಕೇಶ ಪಾಟೀಲ, ಪೋಲಕಪಳ್ಳಿ, ಕಾರಕಪಳ್ಳಿ, ನಿರ್ಣಾ, ಮುತ್ತಂಗಿ, ಉಡಬನಳ್ಳಿ, ಬೇಮಳಖೇಡಾ, ಮನ್ನಾಎಖ್ಖೇಳಿ ಹಾಗೂ ಕರಕನಳ್ಳಿ ಗ್ರಾಮಗಳ ಬಿಜೆಪಿ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT