ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರಿಗೆ ಪ್ರಶಸ್ತಿ ಸಿಗದೆಂದು ಭಾವಿಸಿದ್ದೆ: ಪದ್ಮಶ್ರೀ ಪುರಸ್ಕೃತ ಖಾದ್ರಿ

Last Updated 12 ಫೆಬ್ರವರಿ 2023, 14:39 IST
ಅಕ್ಷರ ಗಾತ್ರ

ಬೀದರ್: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೀದರ್‌ ಘಟಕದ ಪದಾಧಿಕಾರಿಗಳು ಪದ್ಮಶ್ರೀ ಪುರಸ್ಕೃತ ಶಾ ರಶೀದ್ ಅಹ್ಮದ್ ಖಾದ್ರಿ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು.

ಶಾ ರಶಿದ್ ಅಹ್ಮದ್ ಖಾದ್ರಿ ಮಾತನಾಡಿ,‘2014ರವರೆಗೆ ಐದು ವರ್ಷ ನಿರಂತರವಾಗಿ ₹ 12,000 ಖರ್ಚು ಮಾಡಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದ್ದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮುಸ್ಲಿಮರಿಗೆ ಪ್ರಶಸ್ತಿ ಸಿಗಲು ಸಾಧ್ಯವಿಲ್ಲ ಎಂದು ಭಾವಿಸಿ ಅರ್ಜಿ ಸಲ್ಲಿಸುವುದನ್ನು ನಿಲ್ಲಿಸಿದ್ದೆ’ ಎಂದರು.

‘ನಾನು ಯಾವುದೇ ಅರ್ಜಿ ಸಲ್ಲಿಸದಿದ್ದರೂ ಬಿಜೆಪಿ ಸರ್ಕಾರ ನನ್ನ ಸೇವೆಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಇದಕ್ಕೂ ಮಿಗಿಲಾಗಿ ಸಂಘದ ಕಾರ್ಯಕರ್ತರು ನಮ್ಮ ಮನೆಗೆ ಬಂದು ನನಗೆ ಅಭಿನಂದಿಸಿದ್ದು ಸಂತಸ ತಂದಿದೆ’ ಎಂದು ಹೇಳಿದರು.

ಆರ್‌ಎಸ್‌ಎಸ್‌ ವಿಭಾಗ ಪ್ರಚಾರಕ ವಿಜಯ ಮಾಂತೇಶ, ಕೃಷ್ಣ ರೆಡ್ಡಿ, ಜಿಲ್ಲಾ ಕಾರ್ಯವಾಹ ಭಾರ್ಗವಾಚಾರಿ ಜಿಲ್ಲಾ ವ್ಯವಸ್ಥಾ ಪ್ರಮುಖ ಬಸವರಾಜ ನಿಂಬುರೆ ಹಾಗೂ ನಗರ ಪ್ರಚಾರಕ ಹನುಮಂತ ಒಂಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT