ಸೋಮವಾರ, ಜನವರಿ 25, 2021
26 °C

ಜಕಣಾಚಾರಿ ಸಂಸ್ಮರಣಾ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಕಣಾಚಾರಿ ಸಂಸ್ಮರಣಾ ದಿನ ಆಚರಿಸಲಾಯಿತು.‌

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ಜಕಣಾಚಾರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಶ್ರೀ ವಿಶ್ವಕರ್ಮ ಧರ್ಮ ವರ್ಧನಿ ಸಂಘ: ನಗರದ ಶ್ರೀ ವಿಶ್ವಕರ್ಮ ಧರ್ಮ ವರ್ಧನಿ ಸಂಘದ ವತಿಯಿಂದ ಚೌಳಿ ರಸ್ತೆಯಲ್ಲಿರುವ ವಿಶ್ವಕರ್ಮ ಸಮುದಾಯ ಭವನದಲ್ಲಿ ಅಮರ ಶಿಲ್ಪಿ ಜಕಣಾಚಾರಿ ಜಯಂತಿ ಆಚರಿಸಲಾಯಿತು.

ಶ್ರೀ ವಿಶ್ವಕರ್ಮ ಧರ್ಮ ವರ್ಧನಿ ಸಂಘದ ಅಧ್ಯಕ್ಷ ಶ್ರೀನಿವಾಸ ವಿಶ್ವಕರ್ಮ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಕೌಶಲ ಅಭಿವೃಧಿ ಅಧಿಕಾರಿ ಶಂಕರರಾವ್ ಪಂಚ್ಯಾಳ, ಚಿತ್ರಕಲಾ ಉಪನ್ಯಾಸಕ ಬಿ.ಕೆ. ಬಡಿಗೇರ, ಜಿಲ್ಲಾ ಕೌಶಲ ತರಬೇತಿದಾರ ರಮೇಶ ಚೆಟ್ನಳಿ ಮಾತನಾಡಿದರು.

ಶ್ರೀನಿವಾಸ ಪೊದ್ದಾರ, ಬಲಭೀಮರಾವ್ ಚಳಕಾಪೂರ, ರಘುನಾಥರಾವ್ ವಿಶ್ವಕರ್ಮ, ಜಿ. ಪ್ರಭಾಕರ, ದತ್ತಾತ್ರಿ ಹಿಪ್ಪಳಗಾಂವ, ವಿಠಲ ಬಕಚೌಡಿ ಇದ್ದರು. ಸುಭಾಷ ಪಂಚ್ಯಾಳ ಅತಿವಾಳ ಸ್ವಾಗತಿಸಿದರು. ರಮೇಶ ಸೋನಾರ ನಿರೂಪಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.