ಈ ‘ಸುಲ್ತಾನ್’ ಬೆಲೆ ₹15 ಲಕ್ಷ!

ಜನವಾಡ: ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಪಶು ಮೇಳದಲ್ಲಿ ‘ಸುಲ್ತಾನ್’ನದ್ದೇ ಚರ್ಚೆ.
6 ಅಡಿ ಎತ್ತರ, 8.5 ಅಡಿ ಉದ್ದ ಹಾಗೂ 1,462 ಕೆ.ಜಿ. ಭಾರ ಇರುವ ಒಂಗೋಲ್ ಹೋರಿಯೇ ಈ ‘ಸುಲ್ತಾನ್’. ಉಡುಪಿ ಜಿಲ್ಲೆಯ ಉಪ್ಪಿನಕೋಟೆಯ ಮಹಮ್ಮದ್ ಇರ್ಷಾದ್ ಆಬೇದಿನ್ ಅವರು ‘ಸುಲ್ತಾನ್’ ಹೆಸರಿನ ಈ ಹೋರಿಯನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಹೋರಿಯನ್ನು ಕಂಡ ರೈತರು ಅದರ ಭಾರಿ ಗಾತ್ರದಿಂದಾಗಿ ಅಬ್ಬಬ್ಬಾ! ಎಂಥ ಹೋರಿ... ಎಂದು ಉದ್ಗರಿಸುತ್ತಿದ್ದಾರೆ.
‘ಒಂಗೋಲ್ ಉತ್ಕೃಷ್ಟ ತಳಿಗಳಲ್ಲಿ ಒಂದಾಗಿದೆ. ಈ ಹೋರಿಯನ್ನು ₹15 ಲಕ್ಷಕ್ಕೆ ಕೇಳುತ್ತಿದ್ದಾರೆ. ಆದರೆ, ಮಾರಾಟಕ್ಕೆ ಇಟ್ಟಿಲ್ಲ. ಹೋರಿಯನ್ನು ಮನೆ ಮಗನಂತೆ ಸಾಕಿದ್ದೇವೆ’ ಎಂದು ಹೇಳುತ್ತಾರೆ ಮಹಮ್ಮದ್ ಇರ್ಷಾದ್ ಆಬೇದಿನ್.
ಆಬೇದಿನ್ ಅವರ ಮಳಿಗೆಯಲ್ಲಿ ಉದ್ದನೆಯ ಕೋಡುಗಳು ಇರುವ ಕಾಂಕ್ರೇಜ್ ಎತ್ತು ಕೂಡ ಇದೆ. ಅದರ ಮೌಲ್ಯ ₹ 4 ಲಕ್ಷ ಎಂದು ತಿಳಿಸುತ್ತಾರೆ ಅವರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.