ಔರಾದ್: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಇಲ್ಲಿಯ ಸಾಯಿ ದೇವಸ್ಥಾನ ಆವರಣದಲ್ಲಿ ಶನಿವಾರ ರಾತ್ರಿ ನಡೆದ ಕನ್ನಡ ದೀಪೋತ್ಸವ ಹಾಗೂ ಶಿವಶರಣ ಹರಳಯ್ಯ ನಾಟಕ ಪ್ರದರ್ಶನ ಗಮನ ಸೆಳೆಯಿತು.

ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಾಯಿ ದೇವಸ್ಥಾನ ಸಮಿತಿ ಆಯೋಜಿಸಿದ್ದ ವಿ. ಸಿದ್ದರಾಮಣ್ಣ ರಚನೆ ಹಾಗೂ ಜಗದೀಶ ಜಾಣಿ ನಿರ್ದೇಶನದ ಶಿವಶರಣ ಹರಳಯ್ಯ ನಾಟಕದಲ್ಲಿ ಕಲ್ಯಾಣ ಕ್ರಾಂತಿಗೆ ಕಾರಣವಾದ ಬಸವಣ್ಣ-ಹರಳಯ್ಯ-ಮಧುವರಸರ ಸನ್ನಿವೇಶವು ಅರ್ಥಪೂರ್ಣವಾಗಿತ್ತು. ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದ ಕಲಾವಿದರ ಅಭಿನಯಕ್ಕೆ ಜನರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

ಉದ್ಘಾಟನೆ: ನಾಟಕ ಪ್ರದರ್ಶನ ಮೊದಲು ತಾ.ಪಂ. ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ನಾಟಕಗಳು ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುವ ಅತ್ಯಂತ ಗಟ್ಟಿ ಮಾಧ್ಯಮ’ ಎಂದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನೀಲ ದೇಶಮುಖ, ನಿವೃತ್ತ ಬಸ್ ಚಾಲಕ ದೇವಪ್ಪ, ದೇವಸ್ಥಾನದ ಆವರಣ ರಂಗೋಲಿ ಮೂಲಕ ಅಲಂಕರಿಸಿದ ಪೋಲಪ್ಪ ಪವಾರ್ ಹಾಗೂ ರಮೇಶ ಪಾಂಚಾಳ ಅವರನ್ನು ಗೌರವಿಸಲಾಯಿತು.

ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಎಂ. ಅಮರವಾಡಿ, ಪ.ಪಂ ಅಧ್ಯಕ್ಷೆ ಸರುಬಾಯಿ ಘುಳೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಹೆಬ್ಬಾಳೆ, ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಶಿವಾನಂದ ಮುಕ್ತೆದಾರ, ಗುಂಡಯ್ಯ ಸ್ವಾಮಿ, ರಘುನಾಥ ಬಿರಾದಾರ, ಭೀಮಾಶಂಕರ ಜೀರ್ಗೆ, ವಿಜಯಕುಮಾರ ಶಾಸ್ತ್ರಿ, ಪಿಎಸ್ಐ ವಸೀಮ ಪಟೇಲ್, ಶಬ್ಬೀರ್, ಅಶೋಕ ಶೆಂಬೆಳ್ಳೆ, ಅಮರಸ್ವಾಮಿ, ಅಂಬಾದಾಸ ನೇಳಗೆ, ಸಂದೀಪ ಪಾಟೀಲ, ಮಹಾನಂದಾ ಎಂಡೆ, ರಾಜೇಂದ್ರ ನಾಯ್ಕ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.