ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಗಡಿಯಲ್ಲಿ ಕನ್ನಡ ಕೆಲಸ ನಡೆಯಲಿ: ಸಾಹಿತಿ ಸಿದ್ರಾಮಪ್ಪ ಮಾಸಿಮಾಡೆ

Published 18 ಜುಲೈ 2023, 15:44 IST
Last Updated 18 ಜುಲೈ 2023, 15:44 IST
ಅಕ್ಷರ ಗಾತ್ರ

ಬೀದರ್‌: ‘ಗಡಿ ಭಾಗದಲ್ಲಿ ಕನ್ನಡದ ಕೆಲಸಗಳು ನಿರಂತರವಾಗಿ ನಡೆಯುತ್ತಿರಬೇಕು’ ಎಂದು ಸಾಹಿತಿ ಸಿದ್ರಾಮಪ್ಪ ಮಾಸಿಮಾಡೆ ತಿಳಿಸಿದರು.

ಶ್ರೀ ಕನಕ ಕನ್ನಡ ಸಾಂಸ್ಕೃತಿಕ ಸಂಘದಿಂದ ನಗರದ ಕುಂಬಾರವಾಡದಲ್ಲಿ ಭಾನುವಾರ ಏರ್ಪಡಿಸಿದ್ದ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಭಾಷೆ, ಸಂಸ್ಕೃತಿಯ ಬೆಳವಣಿಗೆಗೆ ಎಲ್ಲರೂ ಶ್ರಮಿಸಬೇಕು. ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದರು.

ಯುವ ಲೇಖಕ ಸಂಜೀವಕುಮಾರ ಅತಿವಾಳೆ ಮಾತನಾಡಿ, ಜನಪರ ಕಾಳಜಿಯುಳ್ಳ ಸಾಹಿತ್ಯ ರಚನೆ ಇಂದಿನ ಅಗತ್ಯವೆಂದು ತಿಳಿಸಿದರು.

ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಮಾತನಾಡಿ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಕೆಲಸಗಳಿಗೆ ಪ್ರೋತ್ಸಾಹಿಸಲು, ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಲು ಬಗೆಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಪ್ರಭಾರ ಜಿಲ್ಲಾ ವಿಮಾ ಅಧಿಕಾರಿ ಅನಿಲಕುಮಾರ ಹಾಲಹಳ್ಳಿ, ಗೊಂಡ ಸಾಹಿತ್ಯ, ಸಾಂಸ್ಕೃತಿಕ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಲಗೊಂಡ, ಪಿಡಿಒ ಸಂಘದ ಜಿಲ್ಲಾ ಘಟಕದ ಖಜಾಂಚಿ ದೇವಪ್ಪ ಚಾಂಬೋಳೆ, ಸಾಹಿತಿ ವೀರೇಶ್ವರಿ ಮೂಲಗೆ, ಸುನೀಲ್ ಚಿಲ್ಲರ್ಗಿ, ಭೀಮಶಾ ನಿರ್ಣಾಕರ, ಮುರಳಿನಾಥ ಮೇತ್ರೆ, ಲಕ್ಷ್ಮಣ ಮೇತ್ರೆ, ಶ್ರೀಪತಿ ಮೇತ್ರೆ ಹಾಜರಿದ್ದರು. 

ಕವಿಗಳಾದ ನಿರಹಂಕಾರ ಬಂಡಿ, ಚನ್ನಪ್ಪ ಸಂಗೋಳಗಿ, ಮಹಮ್ಮದ್ ತಾಜೊದ್ದಿನ್, ಮಂಗಲಾ ಪೋಳ, ಲಕ್ಷ್ಮಣ ಮೇತ್ರೆ, ಅವಿನಾಶ ಸೋನೆ, ಅಜೀತ್ ಎನ್. ರವಿದಾಸ ಕಾಂಬಳೆ, ಸಾವಿತ್ರಿ ಎಂ. ಕೌ., ಕವಿತೆ ವಾಚನ ಮಾಡಿದರು. 

ಕಲಾವಿದರಾದ ಅಂಬವ್ವ ಮಲ್ಕಾಪುರ, ಮನೋಹರ ಹುಪಳಾ, ಕಾಂಚನಾ, ಮೀನಾಕ್ಷಿ, ಭಾಗ್ಯಶ್ರೀ, ಶೈಯಾ ದುರ್ಗೆ, ಭವಾನಿ ವಗ್ಗೆ, ಕನಕರಾಜ ಜೋಳದಾಪಕೆ ಹಾಗೂ ಸಂಗಡಿಗರು ವಚನ ಗಾಯನ, ದಾಸರ ಪದ, ಜಾನಪದ ಗೀತೆ, ಭರತನಾಟ್ಯ, ಸಾಮೂಹಿಕ ನೃತ್ಯ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT