ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್ | ‘ನೊಂದವರ ನೆರವಿಗೆ ಅಲೈನ್ಸ್ ಕ್ಲಬ್ ಸದಾ ಸಿದ್ಧ’

Published : 18 ಆಗಸ್ಟ್ 2024, 14:23 IST
Last Updated : 18 ಆಗಸ್ಟ್ 2024, 14:23 IST
ಫಾಲೋ ಮಾಡಿ
Comments

ಬೀದರ್: ‘‌ದೇಶದಲ್ಲಿ ಎಲ್ಲಿಯಾದರೂ ಅನಾಹುತಗಳು ನಡೆದು ಅವುಗಳಿಂದ ಸಮಸ್ಯೆಗೆ ಸಿಲುಕಿದವರಿಗೆ ಸಹಾಯ ಮಾಡಲು ಅಲೈನ್ಸ್ ಕ್ಲಬ್ ಸದಾ ಸಿದ್ಧವಿದೆ’ ಕ್ಲಬ್ ಅಂತಾರಾಷ್ಟ್ರೀಯ ಅಧ್ಯಕ್ಷ ಬಾಲಚಂದ್ರನ್ ಹೇಳಿದರು.

ಇಲ್ಲಿಯ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‌‘ಈಚೆಗೆ ಉತ್ತರ ಕನ್ನಡ ಜಿಲ್ಲೆಯ ಅಂಕೊಲಾ ತಾಲ್ಲೂಕಿನ ಶಿರೂರದಲ್ಲಿ ಗುಡ್ಡ ಕುಸಿತದಿಂದ ಹಲವಾರು ಜನರು ಪ್ರಾಣ ಕಳೆದುಕೊಂಡು ನೂರಾರು ಜನರು ಆಶ್ರಯ ಕಳೆದುಕೊಂಡಿದ್ದರು. ಅವರೆಲ್ಲರಿಗೆ ಅಲೈನ್ಸ್ ಕ್ಲಬ್ ಮುಖಾಂತರ ಕಾರವಾರ, ವಿಜಯಪುರ ಸೇರಿದಂತೆ ವಿವಿಧ ಕಡೆಗಳಿಂದ ಹಣ ಸಂಗ್ರಹಿಸಿ ಬಟ್ಟೆ, ಪಾತ್ರೆ, ಹೊದಿಕೆ ಸೇರಿದಂತೆ ಇತರೆ ವಸ್ತುಗಳನ್ನು ನೀಡಿ ಸಹಾಯ ಮಾಡಲಾಯಿತು’ ಎಂದು ತಿಳಿಸಿದರು.

‘ಅಲೈನ್ಸ್ ಕ್ಲಬ್ ಭಾರತದಲ್ಲಿಯೇ ಅಲ್ಲದೇ ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಬರ್ಮಾ, ನೇಪಾಳ, ಭೂತಾನ, ಮಲೆಷಿಯಾ ಸೇರಿದಂತೆ ಜಗತ್ತಿನ 22 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ಈಗಾಗಲೇ ಸುಮಾರು 25 ಲಕ್ಷ ಸದಸ್ಯರನ್ನು ಹೊಂದಿದೆ’ ಎಂದು ತಿಳಿಸಿದರು.

ಅಂತರಾಷ್ಟ್ರೀಯ ನಿರ್ದೇಶಕ ಬಸವರಾಜ ಹೇಡೆ ಮಾತನಾಡಿ, ‌‘ನಾನು ಎರಡು ಬಾರಿ ಜಿಲ್ಲಾ ಗವರ್ನರ್(ಅಧ್ಯಕ್ಷ) ಆಗಿ ಕೆಲಸ ಮಾಡಿದ್ದು  ನನ್ನ ಅವಧಿಯಲ್ಲಿ ಸಾರ್ವಜನಿಕರಿಗೆ ರಕ್ತದಾನ ಶಿಬಿರ, ಕಣ್ಣಿನ ಶಿಬಿರ, ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗಿದೆ’ ಎಂದರು.

ಪದಾಧಿಕಾರಿಗಳ ವಿವರ: ಶರಣಯ್ಯ ಸ್ವಾಮಿ (ಗವರ್ನರ್), ಅನಿಲ ರಾಯಪಳ್ಳಿ, ದೀಲಿಪ ಕಮಠಾಣೆ (ಉಪಾಧ್ಯಕ್ಷರು), ಬಾಬುರಾವ್ ದಾನಿ (ಕಾರ್ಯದರ್ಶಿ), ಬಸವರಾಜ ಹೊಸಮನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT