ಸೋಮವಾರ, ಜೂನ್ 27, 2022
21 °C

ಕೌಠಾ: ಸಸಿ ನೆಡುವ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಔರಾದ್ ತಾಲ್ಲೂಕಿನ ಕೌಠಾ (ಕೆ) ಗ್ರಾಮದಲ್ಲಿ ಸಸಿ ನೆಡುವ ಅಭಿಯಾನ ನಡೆಯಿತು.

ಪರಿಷತ್ ಬೀದರ್ ನಗರ ಘಟಕದ ಉಪಾಧ್ಯಕ್ಷ ನಾಗೇಶ ಬಿರಾದಾರ ಅವರ ನೇತೃತ್ವದಲ್ಲಿ ಗ್ರಾಮದ ವಿವಿಧೆಡೆ 100 ಸಸಿಗಳನ್ನು ನೆಡಸಲಾಯಿತು.

ಉತ್ತಮ ಪರಿಸರಕ್ಕಾಗಿ ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸಬೇಕು ಎಂದು ಬಿರಾದಾರ ಹೇಳಿದರು.

ಪ್ರಮುಖರಾದ ಉದಯಕುಮಾರ, ಅಮರನಾಥ, ಗಣೇಶ, ರಾಜಕುಮಾರ ಮೇತ್ರೆ, ಕಂಠಯ್ಯ ಸ್ವಾಮಿ, ಸಿದ್ದು ಬಿರಾದಾರ, ಉಮೇಶ ಮಡಿವಾಳ, ಗಣೇಶ ಕೆ.ಸ್ವಾಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.