ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಫಲಾನುಭವಿಗಳ ಮನೆಗೆ ಕೇಂದ್ರ ಸಚಿವ ಭೇಟಿ

Published 1 ಮಾರ್ಚ್ 2024, 16:33 IST
Last Updated 1 ಮಾರ್ಚ್ 2024, 16:33 IST
ಅಕ್ಷರ ಗಾತ್ರ

ಬೀದರ್‌: ಫಲಾನುಭವಿಗಳ ಸಂಪರ್ಕ ಅಭಿಯಾನದ ಅಡಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಮನೆಗೆ ಶುಕ್ರವಾರ ಭೇಟಿ ನೀಡಿದರು.

ಇಲ್ಲಿನ ಶಿವನಗರ ದಕ್ಷಿಣದಲ್ಲಿ ಮನೆ ಮನೆಗೆ ತೆರಳಿ, ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ಸಹಾಯ ಪಡೆದ ಫಲಾನುಭವಿಗಳಿಗೆ ಕರಪತ್ರಗಳು ನೀಡಿ, ಮೋದಿ ಗ್ಯಾರಂಟಿಯ ಸ್ಟೀಕರ್ ಅಂಟಿಸಿದರು. ‘ಮೋದಿ ಸರ್ಕಾರದಿಂದ ದೇಶದ 81 ಕೋಟಿ ಜನರು ವಿವಿಧ ಯೊಜನೆಗಳಡಿ ಫಲಾನುಭವಿಗಳಾಗಿದ್ದಾರೆ. ಅದರಂತೆ ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 15 ಲಕ್ಷ ಫಲಾನುಭವಿಗಳಿದ್ದಾರೆ’ ಎಂದರು.

ಮೋದಿ ಸಮರ್ಥ ನಾಯಕತ್ವದಡಿ ದೇಶವು ಉನ್ನತ್ತಿಯತ್ತ ಸಾಗುತ್ತಿದೆ. ಬೀದರ್‌ ಲೋಕಸಭಾ ಕ್ಷೇತ್ರದಲ್ಲೂ ಎಲ್ಲಾ ಯೋಜನೆಗಳು ಅನುಷ್ಠಾನಗೊಂಡಿವೆ. ಬರುವ ಚುನಾವಣೆಯಲ್ಲಿ ನನಗೆ ಮೂರನೆ ಬಾರಿಗೆ ಆಶೀರ್ವಾದಿಸಿ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಬೇಕೆಂದು ಹೇಳಿದರು.

ಬಿಜೆಪಿ ರಾಜ್ಯ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ಪ್ರದೀಪ ಕಾಡಾದಿ, ಜಿಲ್ಲಾ ಸಂಚಾಲಕ ದಿನೇಶ ಮೂಲಗೆ, ಪ್ರಮುಖರಾದ ನಿತಿನ್‌ ಕರ್ಪೂರ, ಗೋಪಾಲ, ಸೂರ್ಯಕಾಂತ ರಾಮಶೆಟ್ಟಿ, ಶರಣಪ್ಪ ಪಂಚಾಕ್ಷರಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT