ಬೀದರ್: ‘ಕೇಂದ್ರ ಸರ್ಕಾರ, ದೇಶದ ಪ್ರತಿಯೊಂದು ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಪ್ರತಿ ರಾಜ್ಯದಲ್ಲಿ ಏಮ್ಸ್ ಕಾಲೇಜು ಆರಂಭಿಸುವ ಗುರಿ ಹೊಂದಿದೆ’ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ನಗರದ ಸರ್ಕಾರಿ ಶುಶ್ರೂಷಾ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಶುಶ್ರೂಷಾ ಶಾಲೆಯ 7ನೇ ತಂಡ, ಬ್ರಿಮ್ಸ್ ಶುಶ್ರೂಷಾ ಮಹಾವಿದ್ಯಾಲಯದ 1ನೇ ತಂಡದ ವಿದ್ಯಾರ್ಥಿಗಳ ದೀಪದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಮೊದಲು ಬ್ರಿಮ್ಸ್ ಆರಂಭವಾದಾಗ ಹೊರ ರೋಗಿಗಳ ಸಂಖ್ಯೆ ಕೇವಲ 400 ಇತ್ತು. ಈಗ ಅದರ ಸಂಖ್ಯೆ 1000ಕ್ಕೆ ತಲುಪಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಅದಕ್ಕೆ ಅನುಗುಣವಾಗಿ ಸಿದ್ಧತೆ ಮಾಡಿಕೊಂಡು ರೋಗಿಗಳಿಗೆ ಉತ್ತಮ ಸೇವೆ ಕೊಡಬೇಕು ಎಂದು ಸೂಚಿಸಿದರು.
ಭಾರತವು ಆತ್ಮನಿರ್ಭರ ಯೋಜನೆ ಅಡಿಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗುವತ್ತ ಪಯಣ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಭಾರತವು ಫಾರ್ಮಾಸಿಟಿಕಲ್ ಹಬ್ ಆಗಲಿದೆ ಎಂದು ಹೇಳಿದರು.
ಶಾಸಕ ರಹೀಮ್ ಖಾನ್ ಮಾತ ನಾಡಿದರು. ಸರ್ಕಾರಿ ಶುಶ್ರೂಷಾ ಶಾಲೆ ಹಾಗೂ ಬ್ರಿಮ್ಸ್ ಶುಶ್ರೂಷಾ ಮಾಹಾವಿದ್ಯಾಲದ ಪ್ರಾಂಶು ಪಾಲ ರಾಜಕುಮಾರ ಮಾಳಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ನಿರ್ದೇಶಕಿ ಡಾ. ಪರಿಮಳಾ ಮರೂರ, ಬ್ರಿಮ್ಸ್ ಪ್ರಾಂಶುಪಾಲ ಡಾ. ರಾಜೇಶ ಪಾರಾ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಅನಿಲಕುಮಾರ ಚಿಂತಾಮಣಿ, ಬ್ರಿಮ್ಸ್ ಬೋಧಕ ಆಸ್ಪತ್ರೆ ಬೀದರ್‌ನ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ್ ಹಾಗೂ ಡಾ. ದೀಪಾ ಖಂಡ್ರೆ, ಬ್ರಿಮ್ಸ್ ಬೋಧಕ ಆಸ್ಪತ್ರೆಯ ಪ್ರಭಾರಿ ಶುಶ್ರೂಷಾ ಅಧೀಕ್ಕಿ ಶಾಂತಾ.ಎಸ್, ಇಮಾನುವೆಲ್, ಪ್ರಕಾಶ ಮಹಿಮಾಕರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.