ಮಂಗಳವಾರ, ಜನವರಿ 31, 2023
18 °C
ರಾಷ್ಟ್ರೀಯ ಕಾರ್ಯಾಗಾರದಲ್ಲಿ ಡಾ. ಆರ್.ಎಸ್. ಸರಶೆಟ್ಟಿ ಹೇಳಿಕೆ

ಔಷಧೀಯ ಸಸ್ಯಗಳ ಮಹತ್ವ ಅರಿಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ವಿದ್ಯಾರ್ಥಿಗಳು ಔಷಧೀಯ ಸಸ್ಯಗಳ ಮಹತ್ವ ಅರಿಯಬೇಕು ಎಂದು ಸಂಪನ್ಮೂಲ ವ್ಯಕ್ತಿ ಡಾ. ಆರ್.ಎಸ್. ಸರಶೆಟ್ಟಿ ಹೇಳಿದರು.

ನಗರದ ಎನ್.ಕೆ. ಜಾಬಶೆಟ್ಟಿ ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನಲ್ಲಿ ಆಯೋಜಿಸಿದ್ದ ರಸಶಾಸ್ತ್ರ ಕುರಿತ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿಯಲ್ಲಿನ ಪ್ರತಿ ವೃಕ್ಷವೂ ದಿವ್ಯ ಔಷಧಿಯೇ ಆಗಿದೆ. ಆಯುರ್ವೇದದಲ್ಲಿ 13 ಸಾವಿರ ಸಸಿಗಳು ಔಷಧೀಯ ಗುಣಗಳನ್ನು ಹೊಂದಿವೆ ಎಂದು ತಿಳಿಸಿದರು.

‘ಊಟ ಬಲ್ಲವನಿಗೆ ರೋಗವಿಲ್ಲ’ ಎಂದು ಜನಪದರು ನಾಣ್ಣುಡಿಯಲ್ಲಿ ಆರೋಗ್ಯದ ಗುಟ್ಟು ಹೇಳಿದ್ದಾರೆ. ಮನುಷ್ಯ ಆಚಾರ, ವಿಚಾರ ಸರಿ ಇಟ್ಟುಕೊಂಡು, ಸಾತ್ವಿಕ ಆಹಾರ ಸೇವಿಸಿದರೆ ಸಾಕು ಔಷಧಿಗೆ ಮೊರೆ ಹೋಗುವ ಅಗತ್ಯವೇ ಇಲ್ಲ ಎಂದು ನುಡಿದರು.

ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ. ಸಂತೋಷ ಯಡಹಳ್ಳಿ ಮಾತನಾಡಿದರು. ಡಾ. ಶ್ರೀನಿವಾಸ ಒಡೆಯರ್ ಅವರು ಸಸ್ಯ ಔಷಧಿಗಳ ಉಪಯೋಗ ಮತ್ತು ಅದರ ಮಹತ್ವ, ಡಾ. ರಾಮಕೃಷ್ಣ ಅವರು ರಸಶಾಸ್ತ್ರದಲ್ಲಿ ಇತ್ತೀಚಿನ ಹೊಸ ಅವಿಷ್ಕಾರಗಳು ಕುರಿತು ಉಪನ್ಯಾಸ ನೀಡಿದರು. 60 ಮಂದಿ ಪ್ರಾಧ್ಯಾಪಕರು ವಿವಿಧ ಪ್ರಬಂಧ ಮಂಡಿಸಿದರು.
ಚಿದಂಬರ ಶಿಕ್ಷಣ ಸಂಸ್ಥೆಯ ಡಾ. ಚನ್ನಬಸಪ್ಪ ಹಾಲಹಳ್ಳಿ, ಪ್ರಭುಶೆಟ್ಟಿ ಮುದ್ದಾ, ಬಿ.ಜಿ. ಶೆಟಕಾರ್, ಬಸವರಾಜ ಜಾಬಶೆಟ್ಟಿ, ಶಿವಶರಣಪ್ಪ ಸಾವಳಗಿ, ಉದಯಭಾನು ಹಲವಾಯಿ, ಮಡಿವಾಳಪ್ಪ ಗಂಗಶೆಟ್ಟಿ, ಶರಣಪ್ಪ ತಿರ್ಲಾಪುರೆ, ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ, ಕಾರ್ಯಕ್ರಮ ಸಂಯೋಜಕ ಡಾ. ಬಂಡೆಪ್ಪ, ಡಾ. ವಿಜಯಕುಮಾರ ಬಿರಾದಾರ, ಡಾ. ಧೂಳಪ್ಪ, ಡಾ. ಪ್ರವೀಣ ಸಿಂಪಿ ಇದ್ದರು.

ಪ್ರಾಚಾರ್ಯ ಡಾ. ಚಂದ್ರಕಾಂತ ಹಳ್ಳಿ ಸ್ವಾಗತಿಸಿದರು. ಉಪ ಪ್ರಾಚಾರ್ಯೆ ಡಾ. ಶ್ರೀದೇವಿ ಸ್ವಾಮಿ ವಂದಿಸಿದರು.
ಕರ್ನಾಟಕ, ತೆಲಂಗಾಣ ಹಾಗೂ ಮಹಾರಾಷ್ಟ್ರದ 500 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು