ಔರಾದ್: ಕಳೆದ ವಾರ ಸುರಿದ ಭಾರಿ ಮಳೆಯಿಂದ ಔರಾದ್ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಸಾಕಷ್ಟು ಹಾನಿಯಾಗಿದ್ದು, ಸಂತ್ರಸ್ತ ರೈತರ ನೆರವಿಗೆ ಸರ್ಕಾರ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಸಚಿವರು ಕೆರೆಯ ಕೋಡಿ ಒಡೆದು ಹಾನಿ ಅನುಭವಿಸಿದ ತಾಲ್ಲೂಕಿನ ಬಾವಲಗಾಂವ ರೈತರನ್ನು ಮಂಗಳವಾರ ಭೇಟಿ ಮಾಡಿ ಧೈರ್ಯ ತುಂಬಿದರು.

ಬಾವಲಗಾಂವ ಸೇರಿದಂತೆ ಕೆಲ ಕಡೆ ಕೆರೆ ಕೋಡಿ ಒಡೆದು ರೈತರಿಗೆ ಹೆಚ್ಚು ಹಾನಿಯಾಗಿದೆ. ಹೊಲದಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗಿ ಅವರ ಭೂಮಿ ಬರಡಾಗಿದೆ. ಅಂತಹ ರೈತರಿಗೆ ಹೆಚ್ಚುವರಿ ಪರಿಹಾರ ಕೊಡಿಸಲು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡುವೆ. ರೈತರು ಯಾವುದೇ ಕಾರಣಕ್ಕೂ ಆತಂಕ ಪಡಬಾರದು ಎಂದು ಧೈರ್ಯ ತುಂಬಿದರು.

ಮಳೆ ಬಂದು ಹಾನಿಯಾದ ಮರುದಿನವೇ ಜಿಲ್ಲಾಧಿಕಾರಿ ನೇತೃತ್ವದ ತಂಡ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಈ ತಾಲ್ಲೂಕಿನಲ್ಲಿ 15 ಸಾವಿರ ಎಕರೆಗೂ ಜಾಸ್ತಿ ಬೆಳೆ ನಾಶವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಎನ್ಡಿಆರ್ಎಫ್ ನಿಯಮಗಳ ಪ್ರಕಾರ ಎಲ್ಲ ರೈತರಿಗೆ ಪರಿಹಾರ ಸಿಗಲಿದೆ ಎಂದು ಹೇಳಿದರು.

ಈ ಮಳೆಯಿಂದ ಕೆಲ ಕಡೆ ನೀರು ನುಗ್ಗಿ ಮನೆಗಳಿಗೆ ಹಾನಿಯಾಗಿದ್ದು, ಮನೆ ಗೋಡೆಗಳೂ ಕುಸಿದು ಬಿದ್ದಿವೆ. ಈಗಾಗಲೇ ಕೆಲವರಿಗೆ ಪರಿಹಾರ ಕೊಡಲಾಗಿದೆ. ಈ ಭಾಗದಲ್ಲಿ ಹಾಳಾದ ರಸ್ತೆ, ಸೇತುವೆ ದುರಸ್ತಿಗೂ ಸೂಚನೆ ನೀಡಲಾಗಿದೆ. ಹೆಚ್ಚು ಮಳೆಯಿಂದ ಅಪಾಯವಾಗುವಂತಹ ಕೆರೆಗಳು ಗುರುತಿಸಿ ಅವುಗಳ ಮರು ನಿರ್ಮಾಣಕ್ಕೂ ತಿಳಿಸಲಾಗಿದೆ. ಬಾವಲಗಾಂವ ಕರೆ ಕೊಡಿ ಒಡೆಯಲು ಕಾರಣ ಗುರುತಿಸಿ ಮುಂದೆ ಹೀಗಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಬೊಂತಿ, ಹಂಗರಗಾ, ಸಾವರಗಾಂವ ಗ್ರಾಮಗಳಿಗೂ ಭೇಟಿ ನೀಡಿ ಮಳೆ ಹಾನಿ ಪರಿಶೀಲಿಸಿದರು.

ಪೌರಾಡಳಿತ ಸಚಿವ ರಹೀಂಖಾನ, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ, ಮುಖಂಡ ಭೀಮಸೇನರಾವ ಸಿಂಧೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ. ಸಿಇಒ ಗಿರೀಶ್ ಬದೋಲೆ, ಸಹಾಯಕ ಆಯುಕ್ತ ಮೊಹಮ್ಮದ ಶಕೀಲ, ತಹಶೀಲ್ದಾರ್ ಮಹೇಶ ಪಾಟೀಲ. ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶನ ಕರಸಪ್ಪ, ಜಂಟಿ ಕೃಷಿ ನಿದೇಶಕ ಆರ್. ದೇವಿಕಾ, ಸಹಾಯಕ ನಿರ್ದೇಶಕ ಧುಳಪ್ಪ, ಸಿಪಿಐ ರಘುವೀರಸಿಂಗ್ ಠಾಕೂರ್, ಮುಖಂಡ ನೆಹರು ಪಾಟೀಲ, ಚನ್ನಪ್ಪ ಉಪ್ಪೆ, ಆನಂದ ಗಲಗಲೆ, ತೋಟಗಾರಿಕೆ, ಸಣ್ಣ ನೀರಾವರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಕಣ್ಣೀರು ಹಾಕಿದ ರೈತರು

ಕೆರೆ ಕೋಡಿ ಒಡೆದು ನಮ್ಮ ಹೊಲ ಪೂರ್ಣ ಕೊಚ್ಚಿ ಹೋಗಿದೆ ಎಂದು ಬಾವಲಗಾಂವ ರೈತ ಜ್ಞಾನೋಬಾ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಎದುರು ಕಣ್ಣೀರು ಹಾಕಿದರು. ಐದು ಎಕರೆ ಜಮೀನಿನಲ್ಲಿ ಬೆಳೆದು ನಿಂತ ಬೆಳೆ ಜೊತೆಗೆ ಮಣ್ಣು ಕೊಚ್ಚಿ ಹೋಗಿದೆ. ಆ ಜಮೀನು ಈಗ ನಮಗೆ ಮೊದಲಿನಂತ ಮಾಡಲು ಸಾಧ್ಯವಿಲ್ಲ. ಹೀಗಾಗಿ ನೀವು ನಮ್ಮ ನೆರವಿಗೆ ಬನ್ನಿ ಎಂದು ಗೋಳು ತೋಡಿಕೊಂಡರು. ನಿಮ್ಮ ಕಷ್ಟ ನನಗೂ ಅರ್ಥವಾಗಿದೆ. ಸರ್ಕಾರದಿಂದ ಸಹಾಯ ಕೊಡಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು. ಕಾದು ಸುಸ್ತಾದ ರೈತರು: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ತಮ್ಮ ಊರಿಗೆ ಬರಲಿದ್ದಾರೆ ಎಂಬ ಮಾಹಿತಿ ಪಡೆದ ಬಾವಲಗಾಂವ ರೈತರು ಬೆಳಿಗ್ಗೆಯಿಂದಲೇ ದಾರಿ ಕಾಯುತ್ತಿದ್ದರು. ಮಧ್ಯಾಹ್ನ 12.25ಕ್ಕೆ ಸಚಿವರ ಪ್ರವಾಸ ಸಮಯ ನಿಗದಿಯಾಗಿತ್ತು. ಆದರೆ ಅವರು ಬಾವಲಗಾಂವ ಗ್ರಾಮಕ್ಕೆ ಬರಲು ಮಧ್ಯಾಹ್ನ 3.30 ಆಗಿತ್ತು. ಇಷ್ಟು ಹೊತ್ತಾದರೂ ರೈತರು ಕೆರೆ ಬಳಿ ಕುಳಿತು ಸಚಿವರಿಗೆ ತಮ್ಮ ಅಹವಾಲು ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.