ಬೀದರ್: ಅತಿವೃಷ್ಟಿಯ ಪರಿಣಾಮ ಈ ಸಲ ಮದ್ಯ ಮಾರಾಟದ ಮೇಲೂ ಉಂಟಾಗಿದೆ. ಜಿಲ್ಲೆಯಿಂದ ಅಬಕಾರಿ ಇಲಾಖೆಗೆ ಸೇರಬೇಕಾದ ಆದಾಯದಲ್ಲಿ ಖೋತಾ ಉಂಟಾಗಿರುವುದು ಗೊತ್ತಾಗಿದೆ.

ಹೋದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮದ್ಯ ಮಾರಾಟ ಹೆಚ್ಚಿಗೆ ಆಗಿಲ್ಲ. ಪ್ರತಿ ವರ್ಷ ಶೇ 5ರಿಂದ 10ರಷ್ಟು ಪ್ರಗತಿಯಾಗುತ್ತದೆ. ಆದರೆ, ಅತಿವೃಷ್ಟಿ ಪರಿಣಾಮ ಮದ್ಯ ಮಾರಾಟದಲ್ಲಿ ಅಷ್ಟು ಕೂಡ ಪ್ರಗತಿಯಾಗಿಲ್ಲ. ಹೆಚ್ಚಿನ ಮಳೆಯಾಗಿದ್ದರಿಂದ ಅಕ್ಟೋಬರ್ನಿಂದ ಡಿಸೆಂಬರ್ ತನಕ ಮದ್ಯ ಮಾರಾಟದಲ್ಲಿ ಪ್ರಗತಿಯೇ ಆಗಿಲ್ಲ. ಹೊಸ ವರ್ಷಾಚರಣೆಯ ದಿನವಾದ 2025ರ ಡಿಸೆಂಬರ್ 31ರಂದು ಬಹುತೇಕ ಇದೇ ರೀತಿಯ ಪರಿಸ್ಥಿತಿ ಇತ್ತು ಎಂದು ಅಬಕಾರಿ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಜಿಲ್ಲಾ ಅಬಕಾರಿ ಇಲಾಖೆಯ ಪ್ರಕಾರ, ಡಿ. 31ರಂದು ಕೆೆಎಸ್ಐಎಲ್ನಿಂದ ಚಿಲ್ಲರೆ ಮಾರುಕಟ್ಟೆಗೆ ₹6 ಕೋಟಿಯ ತನಕ ಮದ್ಯ ಮಾರಾಟವಾಗಿದೆ. ಇದರಲ್ಲಿ ₹5.11 ಕೋಟಿ ಮೌಲ್ಯದ 9,121 ಐಎಮ್ಎಲ್ ಮದ್ಯದ ಬಾಕ್ಸ್, ₹76 ಲಕ್ಷ ಮೌಲ್ಯದ 3,655 ಬಿಯರ್ ಬಾಕ್ಸ್ಗಳು ಸೇರಿವೆ. ಸಾಮಾನ್ಯ ದಿನಗಳಲ್ಲಿ 5 ಸಾವಿರ ಬಾಕ್ಸ್ ಬಿಯರ್ ಮಾರಾಟವಾಗುತ್ತದೆ. ಇದು ತುಸು ಜಾಸ್ತಿ. ಆದರೆ, ಮದ್ಯದ ಮಾರಾಟದಲ್ಲಿ ಅಷ್ಟೇನೂ ಗಮನಾರ್ಹ ವ್ಯತ್ಯಾಸ ಕಂಡು ಬಂದಿಲ್ಲ.

‘ಅತಿವೃಷ್ಟಿಯಿಂದ ಬೀದರ್ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾಳಾಗಿದೆ. ಹೆಚ್ಚಿನವರ ಬಳಿ ಹಣ ಇಲ್ಲ. ಅದರಲ್ಲೂ ಗ್ರಾಮೀಣ ಭಾಗದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದರ ಪರಿಣಾಮ ಮದ್ಯದ ಮಾರಾಟದ ಮೇಲೂ ಆಗಿದೆ’ ಎಂದು ಹೆಸರು ಹೇಳಲಿಚ್ಛಿಸದ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಹೊಸ ವರ್ಷಾಚರಣೆಯ ಡಿ. 31ರ ರಾತ್ರಿಯಿಂದ ಜನವರಿ ಮೊದಲ ವಾರದ ತನಕ ಮದ್ಯ ಮಾರಾಟ ಹೆಚ್ಚಾಗಿರುತ್ತದೆ. ಅದು ಕೂಡ ಬೀದರ್ ಜಿಲ್ಲೆಯಲ್ಲಿ ಹೆಚ್ಚಾಗಿ ಆಗುತ್ತಿಲ್ಲ’ ಎಂದು ಹೇಳಿದ್ದಾರೆ.

ಏರ್ಫೋರ್ಸ್ ಲಿಕ್ಕರ್ಗೆ ಬೇಡಿಕೆ

ಇತ್ತೀಚಿನ ದಿನಗಳಲ್ಲಿ ಏರ್ಫೋರ್ಸ್ ಕ್ಯಾಂಟೀನ್ಗಳಲ್ಲಿ ಮಾಜಿ ಸೈನಿಕರು ವಾಯು ಸೇನೆಗೆ ಸೇರಿದ ನಿವೃತ್ತ ಅಧಿಕಾರಿ ಸಿಬ್ಬಂದಿಯವರು ರಿಯಾಯಿತಿ ದರದಲ್ಲಿ ಖರೀದಿಸುವ ಲಿಕ್ಕರ್ಗೆ ಹೆಚ್ಚಿನ ಬೇಡಿಕೆಯಿದೆ. ಅತ್ಯುತ್ತಮ ದರ್ಜೆಯ ಮದ್ಯವನ್ನು ಅಲ್ಲಿನ ಅಧಿಕಾರಿ ಸಿಬ್ಬಂದಿಯು ರಿಯಾಯಿತಿ ದರದಲ್ಲಿ ಕಡಿಮೆ ಬೆಲೆಗೆ ಖರೀದಿಸುತ್ತಾರೆ. ಅದನ್ನು ಹೊರಗೆ ಎರಡರಿಂದ ಮೂರು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಆದರೆ ಮದ್ಯದಂಗಡಿಗಳಿಗಿಂತ ಅರ್ಧ ಬೆಲೆ ಕಡಿಮೆ ಇರುವುದರಿಂದ ಜನ ಹೆಚ್ಚಾಗಿ ಅವುಗಳನ್ನು ಖರೀದಿಸುತ್ತಿದ್ದಾರೆ ಎಂದು ಗೊತ್ತಾಗಿದೆ. ‘ಏರ್ಫೋರ್ಸ್ ಲಿಕ್ಕರ್ ಮಾರಾಟದ ಮೇಲೆ ಕಡಿವಾಣ ಹಾಕುವುದಕ್ಕೆ ನಮಗೆ ಅವಕಾಶವಿಲ್ಲ. ಅಲ್ಲಿನ ಸಿಬ್ಬಂದಿಗೆ ಸರ್ಕಾರವೇ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತದೆ. ಕೆಲವರು ಅದನ್ನು ಹೊರಗೆ ಮಾರಾಟ ಮಾಡುತ್ತಾರೆ. ಆದರೆ ಅವರಿಗೆ ತಿಂಗಳಿಗೆ ಇಂತಿಷ್ಟೇ ಬಾಟಲ್ ಕೊಡುತ್ತಾರೆ. ಹೀಗಾಗಿ ಹೆಚ್ಚಿನ ಅಕ್ರಮಕ್ಕೆ ಅವಕಾಶವಿಲ್ಲ’ ಎನ್ನುತ್ತಾರೆ ಅಬಕಾರಿ ಇಲಾಖೆಯ ಅಧಿಕಾರಿಗಳು. ಇನ್ನೂ ರಾಜ್ಯದಲ್ಲಿ ನೇರವಾಗಿ ಮದ್ಯ ಕಂಪನಿಗಳ ಮೇಲೆ ಸರ್ಕಾರ ಸುಂಕ ಹಾಕುವುದರಿಂದ ಅಕ್ರಮಕ್ಕೆ ದಾರಿಯಿಲ್ಲ. ಅಲ್ಲಲ್ಲಿ ಕೆಲವರು ಬಡಾವಣೆಗಳಲ್ಲಿ ಮಾರಾಟ ಮಾಡುತ್ತಾರೆ. ಅಂತಹವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಬೀದರ್ನ ಏರ್ಫೋರ್ಸ್ ಕ್ಯಾಂಟೀನ್ನಲ್ಲಿ ನೆರೆಯ ಮಹಾರಾಷ್ಟ್ರ ತೆಲಂಗಾಣದಿಂದ ಮಾಜಿ ಸೈನಿಕರು ವಾಯುಪಡೆಯ ನಿವೃತ್ತ ನೌಕರರು ಬಂದು ಮದ್ಯ ಖರೀದಿಸಿ ಕೊಂಡೊಯ್ಯುತ್ತಾರೆ. ಪ್ರತಿ ತಿಂಗಳು ಅಲ್ಲಿ ಜನಜಾತ್ರೆ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.