ಹುಮನಾಬಾದ್: ‘ಮಾದಾರ ಚೆನ್ನಯ್ಯ ನಮ್ಮ ಕುಲತಿಲಕ. ಅವರನ್ನು ನಾವು ನಿತ್ಯವೂ ಸ್ಮರಿಸಬೇಕು. ಬಸವಾದಿ ಶರಣರ ವಚನಗಳನ್ನು ನಿತ್ಯ ಓದಿ ಅವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಕಲ್ಯಾಣ ಮಹಾಮನೆಯ ಬಸವಪ್ರಭು ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ದುಬಲಗುಂಡಿ ಗ್ರಾಮದಲ್ಲಿ ಬುಧವಾರ ಮಾದಾರ ಚೆನ್ನಯ್ಯನವರ ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಬಸವಣ್ಣ ಮತ್ತು ಮಾದಾರ ಚೆನ್ನಯ್ಯ ನಮಗೆ ಎರಡು ಕಣ್ಣುಗಳಿದ್ದಂತೆ. ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದರು.

‘ಎಲ್ಲ ಗ್ರಾಮಗಳಲ್ಲಿ ಬಸವಣ್ಣ , ಅಂಬೇಡ್ಕರ್, ಕನಕದಾಸರ ಮೂರ್ತಿಗಳು ಸ್ಥಾಪನೆ ಆಗುತ್ತಿರುವುದು ಸಂತಸ. ಆದರೆ ನಾವುಗಳು ಇಂತಹ ಮಹಾತ್ಮರ ಆದರ್ಶ ಪಾಲಿಸದೇ ಇರುವುದು ನೋವಿನ ಸಂಗತಿಯಾಗಿದೆ. ಪ್ರತಿಯೊಬ್ಬರೂ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಬೇಕು. ಸಮಾಜದಲ್ಲಿ ಎಲ್ಲರೂ ಸಹೋದರರಂತೆ ಸೌಹಾರ್ದತೆಯಿಂದ ಜೀವನ ನಡೆಸಬೇಕು’ ಎಂದರು.

ಈ ಸಂದರ್ಭದಲ್ಲಿ ಹವಾ ಮಲ್ಲಿನಾಥ ಮಹಾರಾಜ, ತಡೋಳದ ರಾಜೇಶ್ವರ ಶಿವಾಚಾರ್ಯ, ಮಾದಾರ ಚನ್ನಯ್ಯ ಪೀಠದ ಕಾಂತಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಭೋಜಗುಂಡಿ, ಸದಸ್ಯ ಜೈರಾಮ ಖಜೂರೆ, ಡಿ.ಎಂ.ಎಸ್.ಎಸ್. ರಾಜ್ಯಾಧ್ಯಕ್ಷ ಲಿಂಗರಾಜ್ ತಾರಫೈಲ್, ಜಿ.ಪಂ.ಮಾಜಿ ಸದಸ್ಯ ಗುಂಡುರೆಡ್ಡಿ, ಉದ್ಯಮಿ ಸುಭಾಷ್ ಗಂಗಾ, ಸ್ವತಂತ್ರ್ಯರಾವ ಸಿಂಧೆ, ತಾ.ಪಂ. ಮಾಜಿ ಸದಸ್ಯ ಪರಮೇಶ್ವರ್ ಕಾಳಮದರಗಿ, ಪ್ರಹ್ಲಾದ್ ಚಂಗಟೆ, ದಾಮೋದರ್, ಸುಮಂತ ಕಟ್ಟಿಮನಿ, ರಮೇಶ ಖಜೂರೆ, ಅಪ್ಪಣ್ಣ ಚೀನಕೇರಾ, ಝರೇಪ್ಪ ಕೇರೂರ್, ಕಾಮಣ್ಣ ಕಾಳಮಂದರ್ಗಿ, ವೈಜಿನಾಥ ಚೀನಕೇರಾ, ದಶರಥ ಖಜೂರೆ, ಪುಟ್ಟರಾಜ ಖಜೂರೆ, ವಿನೋಧ ಚಂದನಹಳ್ಳಿ, ಅಮರ ಖಜೂರೆ, ಪ್ರವೀಣ ಖಜೂರೆ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.