ಬೀದರ್: ಹೇಡೆ ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ ರಾಜ್ಯ ಮಟ್ಟದ ವಿ.ಎಸ್.ಮಠ ಕನ್ನಡ ಭಾಷಾ ಬೋಧಕ ಪ್ರಶಸ್ತಿಗೆ ಕಲಬುರ್ಗಿಯ ಸಾಹಿತಿ ಮಹಾಂತೇಶ ಕುಂಬಾರ ಆಯ್ಕೆಯಾಗಿದ್ದಾರೆ.

ಉತ್ತಮ ಭಾಷಾ ಬೋಧಕರಾಗಿದ್ದ ವಿ.ಎಸ್.ಮಠ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಮಾತೃಭಾಷೆ ತೆಲುಗು ಆಗಿದ್ದರೂ ಸಹ ಕನ್ನಡದಲ್ಲಿ ಕಲಬುರ್ಗಿ ವಿಭಾಗದಲ್ಲಿಯೇ ಅಗ್ರಶ್ರೇಣಿಯ ಅಂಕ ಪಡೆದಿದ್ದರು.

ಮಠ ಅವರ ಸ್ನೇಹಿತ ಚನ್ನಬಸವ ಹೇಡೆ ಅವರ ದತ್ತಿನಿಧಿಯಿಂದ ಪ್ರತಿ ವರ್ಷ ₹ 10 ಸಾವಿರ ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ. ಇಲ್ಲಿಯವರೆಗೆ ಸಾಹಿತಿ ನವೋದಯ ವಿದ್ಯಾಲಯದ ಅಧ್ಯಾಪಕ ವಾಸುದೇವ ನಾಡಿಗ(2015), ಸಾಹಿತಿ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಡಾ.ವಿಕ್ರಮ ವಿಸಾಜಿ (2016), ಸಾಹಿತಿ ನಿಲಾವರ ಸುರೇಂದ್ರ ಅಡಿಗ(2017), ಚಿಂತಕಿ ಶಿವಗಂಗಾ ರುಮ್ಮಾ (2018) ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಹಾಂತೇಶ ಕುಂಬಾರ ಬಸವಕಲ್ಯಾಣ ತಾಲ್ಲೂಕಿನ ಮುಚಳಂಬದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೆ.20ರಂದು ಬೀದರ್ನ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 2021ನೇ ಸಾಲಿನ ಪ್ರಶಸ್ತಿಯನ್ನು ಮಹಾಂತೇಶ ಕುಂಬಾರ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಚನ್ನಬಸವ ಹೇಡೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.