ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸಿ ನೆಟ್ಟ ರೋಟರಿ ಕ್ಲಬ್‍ ಸದಸ್ಯರು

Last Updated 28 ಜುಲೈ 2021, 13:06 IST
ಅಕ್ಷರ ಗಾತ್ರ

ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಇಲ್ಲಿಯ ಗುರುದ್ವಾರದಿಂದ ಚಿಕ್ಕಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಸಸಿ ನೆಡಲಾಯಿತು.

ಕ್ಲಬ್ ಪದಾಧಿಕಾರಿಗಳು ರಸ್ತೆಯ ಎರಡೂ ಬದಿಗಳಲ್ಲಿ ಬೇವು ಸೇರಿದಂತೆ ವಿವಿಧ ಬಗೆಯ ಸಸಿಗಳನ್ನು ನೆಟ್ಟರು.

ನಗರ ಸೌಂದರ್ಯೀಕರಣ ಹಾಗೂ ಪರಿಸರ ಸಂರಕ್ಷಣೆ ಭಾಗವಾಗಿ ಕ್ಲಬ್ ವತಿಯಿಂದ 500 ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಡಾ.ನಿತೇಶಕುಮಾರ ಬಿರಾದಾರ ತಿಳಿಸಿದರು.

ಶಾಲೆ, ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಡಲಾಗುವುದು. ನಾಗರಿಕರಲ್ಲಿ ಪರಿಸರ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ, ಉಪಾಧ್ಯಕ್ಷ ಡಾ.ಕಪಿಲ್ ಪಾಟೀಲ, ಕಾರ್ಯದರ್ಶಿ ಸುಧೀಂದ್ರ ಸಿಂದೋಲ್, ಖಜಾಂಚಿ ಕಾಮಶೆಟ್ಟಿ ಚಿಕ್ಕಬಸೆ, ರೋಟರಿ ಕ್ಲಬ್ ಬೀದರ್ ನಿಕಟಪೂರ್ವ ಅಧ್ಯಕ್ಷ ಹಾವಶೆಟ್ಟಿ ಪಾಟೀಲ, ಸ್ವರ್ಣ ಕನ್‍ಸ್ಟ್ರಕ್ಷನ್ಸ್ ಮಾಲೀಕ ವೀರಶೆಟ್ಟಿ ಮಣಗೆ, ನಿತಿನ್ ಕರ್ಪೂರ, ಡಾ.ರಿತೇಶ ಸುಲೆಗಾಂವ, ಸಚ್ಚಿದಾನಂದ ಚಿದ್ರೆ, ಸತೀಶ್ ಸ್ವಾಮಿ, ಶಿವಕುಮಾರ ಪಾಟೀಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT