ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾಲ್ಕಿ | ಈಶಾನ್ಯ ಪದವೀಧರ ಚುನಾವಣೆ: 2,883 ಮತದಾರರಿಂದ ಹಕ್ಕು ಚಲಾವಣೆ

Published 3 ಜೂನ್ 2024, 16:04 IST
Last Updated 3 ಜೂನ್ 2024, 16:04 IST
ಅಕ್ಷರ ಗಾತ್ರ

ಭಾಲ್ಕಿ: ಈಶಾನ್ಯ ಪದವೀಧರ ಚುನಾವಣೆಯಲ್ಲಿ ತಾಲ್ಲೂಕಿನ ನಾಲ್ಕು ಮತಗಟ್ಟೆಗಳಲ್ಲಿ ಒಟ್ಟು 2883 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಚುನಾವಣೆ ಶಾಂತಿಯುತವಾಗಿ ನಡೆದಿದೆ.

ಬೆಳಿಗ್ಗೆ ಸಮಯದಲ್ಲಿ ಜಿಟಿಜಿಟಿ ಮಳೆ ಸುರಿದಿದ್ದರಿಂದ ಮತದಾನ ನಿಧಾನಗತಿಯಲ್ಲಿ ಸಾಗಿತ್ತು. ನಂತರ ಪದವೀಧರ ಮತದಾರರು, ಮತ ಚಲಾಯಿಸಲು ತಂಡೋಪತಂಡವಾಗಿ ಆಗಮಿಸಿ, ಸರತಿಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದು ಕಂಡು ಬಂತು.

ಸಚಿವ ಈಶ್ವರ ಖಂಡ್ರೆ ಅವರು ಭಾತಂಬ್ರಾ ಗ್ರಾಮದ ಮತಗಟ್ಟೆ ಸಮೀಪ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಕುಳಿತುಕೊಂಡು ಕೆಲ ಸಮಯ ಮತದಾರರಿಗೆ ಅವರ ಕ್ರಮ ಸಂಖ್ಯೆ ಹೇಳಿಕೊಟ್ಟರು.

‘ಪಟ್ಟಣದ ತಹಶೀಲ್ದಾರ್ ಕಚೇರಿಯ ಮತಗಟ್ಟೆಯಲ್ಲಿ 1,235 ಮತದಾರರು, ಭಾತಂಬ್ರಾ ಗ್ರಾಮದ ಮತಗಟ್ಟೆಯಲ್ಲಿ 634, ಹಲಬರ್ಗಾ ಮತಗಟ್ಟೆಯಲ್ಲಿ 623, ಖಟಕಚಿಂಚೋಳಿ ಗ್ರಾಮದ ಮತಗಟ್ಟೆಯಲ್ಲಿ 391 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು 3,889 ಮತದಾರರು ಇದ್ದಾರೆ’ ಎಂದು ಉಪ ತಹಶೀಲ್ದಾರ್ ಗೋಪಾಲ ಹಿಪ್ಪರಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT