ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿಕೆಟ್‌ ನೀಡದೆ ಬಿಜೆಪಿಯಿಂದ ಅನ್ಯಾಯ: ಸಂಜೀವಕುಮಾರ ಪಾಟೀಲ

Published 14 ಮೇ 2024, 16:27 IST
Last Updated 14 ಮೇ 2024, 16:27 IST
ಅಕ್ಷರ ಗಾತ್ರ

ಬೀದರ್‌: ’ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಮುಖಂಡ ಗುರುನಾಥ ಜ್ಯಾಂತಿಕರ್‌ ಅವರಿಗೆ ಟಿಕೆಟ್‌ ನೀಡದೇ ಬಿಜೆಪಿ ಅನ್ಯಾಯವೆಸಗಿದೆ’ ಎಂದು ಸೌಹಾರ್ದ ಸಹಕಾರಿ ಒಕ್ಕೂಟದ ಉಪಾಧ್ಯಕ್ಷ ಸಂಜೀವಕುಮಾರ ಪಾಟೀಲ ಆರೋಪಿಸಿದರು.

ಜ್ಯಾಂತಿಕರ್ ಅವರು 35 ವರ್ಷಗಳಿಂದ ಬಿಜೆಪಿ, ಆರ್‌ಎಸ್‌ಎಸ್, ಸಹಕಾರ ಭಾರತಿಯಲ್ಲಿ ನಿರಂತರವಾಗಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಆದರೆ, ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಟಿಕೆಟ್ ನೀಡದೆ ಅನ್ಯಾಯ ಮಾಡಿದೆ. ಅವರು ಸ್ವತಂತ್ರವಾಗಿ ಸ್ಪರ್ಧಿಸಬೇಕು. ಅವರು ಮನಸ್ಸು ಮಾಡಿದರೆ ಎಲ್ಲ ಸೌಹಾರ್ದ ಸಹಕಾರಿ ಸಂಘಗಳ ಪದಾಧಿಕಾರಿಗಳಿಂದ ಎಲ್ಲ ರೀತಿಯ ಸಹಕಾರ ಕೊಡಲಾಗುವುದು ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಟ್ಟು 58 ಸಾವಿರಕ್ಕೂ ಅಧಿಕ ಪದವೀಧರ ಮತದಾರರ ನೋಂದಣಿ ಮಾಡಿಸಲಾಗಿದೆ. ಇ-ಸ್ಟ್ಯಾಂಪ್‌, ಶಿಕ್ಷಕರ ವೇತನಕ್ಕಾಗಿ ಹೀಗೆ ಅನೇಕ ಹೋರಾಟದಲ್ಲಿ ಜ್ಯಾಂತಿಕರ್ ಪಾಲ್ಗೊಂಡಿದ್ದಾರೆ ಎಂದರು.

ಸೌಹಾರ್ದ ಸಹಕಾರಿ ಒಕ್ಕೂಟದ ಮುಖಂಡ ಜಗನ್ನಾಥ ಕರಂಜೆ ಮಾತನಾಡಿ, ಈಗಾಗಲೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಗುರುನಾಥ ಜ್ಯಾಂತಿಕರ್ ತಯಾರಿ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಅವರು ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಪ್ರಮುಖರಾದ ನಾಗಶೆಟ್ಟಿ ಪಾಟೀಲ, ಅಣ್ಣಾರಾವ ನಾವದಗೇರೆ, ಸಂಜೀವಕುಮಾರ ಸಜ್ಜನ್, ಬಸವಪ್ರಕಾಶ, ಅಮೃತರಾವ ಹೊಸಮನಿ, ವೀರಶೆಟ್ಟಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT