ಬೀದರ್: ರಾಜ್ಯ ಹಜ್ ಸಮಿತಿ ನೂತನ ಅಧ್ಯಕ್ಷ ಮಹಮ್ಮದ್ ರೌಫೊದ್ದಿನ್ ಕಚೇರಿವಾಲೆ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಅವರ ನೇತೃತ್ವದಲ್ಲಿ ಜಿಲ್ಲೆಯ ಅನೇಕ ಮುಖಂಡರು ಅವರಿಗೆ ಪುಷ್ಪಗುಚ್ಛ ನೀಡಿ ಶುಭ ಕೋರಿದರು.
ಕಚೇರಿವಾಲೆ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಪಕ್ಷ ವಹಿಸಿದ ಹಲವು ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತ ಬಂದಿದ್ದಾರೆ. ಅದರ ಫಲಶ್ರುತಿಯಿಂದಾಗಿಯೇ ಅವರಿಗೆ ಈಗ ರಾಜ್ಯ ಹಜ್ ಸಮಿತಿ ಅಧ್ಯಕ್ಷ ಸ್ಥಾನ ಲಭಿಸಿದೆ ಎಂದು ನಾಗಮಾರಪಳ್ಳಿ ಹೇಳಿದರು.
ಸಮಿತಿಯಿಂದ ಹಜ್ ಯಾತ್ರಿಗಳಿಗೆ ಉತ್ತಮ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಿದ್ದಾರೆ. ಒಳ್ಳೆಯ ಕಾರ್ಯಗಳ ಮೂಲಕ ಬೀದರ್ ಜಿಲ್ಲೆ, ರಾಜ್ಯ ಹಾಗೂ ಪಕ್ಷಕ್ಕೆ ಕೀರ್ತಿ ತರಲಿದ್ದಾರೆ. ಬೀದರ್‌ಗೆ ಮೊದಲ ಬಾರಿಗೆ ರಾಜ್ಯ ಹಜ್ ಸಮಿತಿ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಜಿಲ್ಲೆಯ ಜನರಿಗೆ ಹೆಮ್ಮೆ, ಅಭಿಮಾನದ ಸಂಗತಿಯಾಗಿದೆ ಎಂದು ತಿಳಿಸಿದರು.
‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪಕ್ಷದ ಮುಖಂಡರು ನನಗೆ ನೀಡಿರುವ ರಾಜ್ಯ ಹಜ್ ಸಮಿತಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವೆ. ಈ ಹಿಂದೆ ಹಜ್ ಸಮಿತಿ ಸದಸ್ಯನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಈಗ ಅಧ್ಯಕ್ಷನಾಗಿ ಸಮಿತಿಗೆ ಗೌರವ ತರುವ ಕೆಲಸಗಳನ್ನು ಮಾಡಲಿದ್ದೇನೆ’ ಎಂದು ಕಚೇರಿವಾಲೆ ಹೇಳಿದರು.
ಹಜ್‍ಗೆ ಹೋಗುವವರಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಯಾತ್ರಿಗಳ ಸುರಕ್ಷತೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಹಜ್ ಸಮಿತಿ ಸದಸ್ಯರಾದ ಡಾ. ಮಹಮ್ಮದ್ ಕಬೀರ್ ಅಹಮ್ಮದ್, ಚಾಂದ್ ಪಾಷಾ, ಮುಖಂಡರಾದ ಬಸವರಾಜ ಆರ್ಯ, ತರುಣ ಎಸ್. ನಾಗಮಾರಪಳ್ಳಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.