ತಾಯಿ ಮರಣ ಇಳಿಕೆ ವಿಕಲ್ಪ ಗುರಿ: ಪೆಂಟಾರೆಡ್ಡಿ ಪಾಟೀಲ

7

ತಾಯಿ ಮರಣ ಇಳಿಕೆ ವಿಕಲ್ಪ ಗುರಿ: ಪೆಂಟಾರೆಡ್ಡಿ ಪಾಟೀಲ

Published:
Updated:
Deccan Herald

ಜನವಾಡ: ‘ಸುರಕ್ಷಿತ ಗರ್ಭಪಾತ ಒಳಗೊಂಡ ಲೈಂಗಿಕ ಸಂತಾನೋತ್ಪತ್ತಿ ಆರೋಗ್ಯ ಸೇವೆಯ ಮೂಲಕ ಅನಪೇಕ್ಷಿತ ಜನನಗಳನ್ನು ನಿಯಂತ್ರಿಸುವುದು ಹಾಗೂ ತಾಯಿಯ ಮರಣ ಪ್ರಮಾಣ ತಗ್ಗಿಸುವುದು ವಿಕಲ್ಪ ಯೋಜನೆಯ ಗುರಿಯಾಗಿದೆ’ ಎಂದು ಭಾರತೀಯ ಕುಟುಂಬ ಯೋಜನಾ ಸಂಘ(ಎಫ್‌ಪಿಎಐ)ದ ಸ್ಥಳೀಯ ಶಾಖೆಯ ಅಧ್ಯಕ್ಷ ಪೆಂಟಾರೆಡ್ಡಿ ಪಾಟೀಲ ತಿಳಿಸಿದರು.

ಬೀದರ್ ತಾಲ್ಲೂಕಿನ ಅಷ್ಟೂರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ವಿಕಲ್ಪ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂಘವು ದೇಶದ ಆಯ್ದ 8 ರಾಜ್ಯಗಳಲ್ಲಿ ವಿಕಲ್ಪ ಯೋಜನೆ ಅನುಷ್ಠಾನಗೊಳಿಸುತ್ತಿದೆ’ ಎಂದು ಹೇಳಿದರು.

‘ವಿಕಲ್ಪವು ಸಮುದಾಯದ ಸಹಭಾಗಿತ್ವದಲ್ಲಿ ಲೈಂಗಿಕ ಪ್ರಜನನ ಆರೋಗ್ಯ ಸೇವೆ ಹಾಗೂ ಅದರ ಅರಿವಿನ ಮೂಲಕ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳ ಕೊರತೆ ನೀಗಿಸಲು ಸಹಕಾರಿಯಾಗಲಿದೆ’ ಎಂದು ಸಂಘದ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್. ಸೆಲ್ವಮಣಿ ಉದ್ಘಾಟಿಸಿದರು. ಸಂಘದ ಕೇಂದ್ರ ಕಚೇರಿಯ ಮಾಜಿ ಉಪಾಧ್ಯಕ್ಷೆ ಪ್ರೊ. ಪೂರ್ಣಿಮಾ ಜಿ., ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ದೀಪಾ ಖಂಡ್ರೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಧವರಾವ್ ಪಾಟೀಲ, ಡಾ. ಸಿ.ಎಸ್. ಮಾಲಿಪಾಟೀಲ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಯೋಜನೆಯ ಜಾಗೃತಿ ಜಾಥಾ ನಡೆಯಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !