ಬುಧವಾರ, ಮೇ 18, 2022
25 °C

‘ಒತ್ತಡದ ಬದುಕಿಗೆ ಸಂಗೀತವೇ ಮದ್ದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಸಂಗೀತಕ್ಕೆ ಒತ್ತಡ ನಿವಾರಣೆಯ ಶಕ್ತಿ ಇದೆ. ಮನಸ್ಸಿಗೆ ನೆಮ್ಮದಿ ನೀಡುವ ಸಂಗೀತ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು’ ಎಂದು ಸಾಹಿತಿ ಎಂ.ಜಿ. ದೇಶಪಾಂಡೆ ಹೇಳಿದರು.

ಕೆಇಬಿ ಹನುಮಾನ ಮಂದಿರದಲ್ಲಿ ಮಗನೂರಿನ ಶ್ರೀ ದತ್ತಾತ್ರೇಯ ಭಜನಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಪ್ರಾಯೋಜಿತ ಸಂಗೀತ ಮತ್ತು ಜಾನಪದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅವಸರದ ಬದುಕಿನಲ್ಲಿ ಸಂಗೀತ, ಭಜನೆ, ಕೀರ್ತನೆ ಕೇಳುವುದರಿಂದ ಒಂದಿಷ್ಟು ನಮಗೆ ನೆಮ್ಮದಿ ಇರಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಹಾಸ್ಯ ಕಲಾವಿದರಾದ ಪ್ರಕಾಶ ಕುಲಕರ್ಣಿ ಮಾತನಾಡಿದರು. ನಾರಾಯಣ ಕಲಾಲ್ ಅಧ್ಯಕ್ಷತೆ ವಹಿಸಿದ್ದರು.

ಶ್ಯಾಮರಾವ್ ಕೆ ಬಿ, ಮಲ್ಲಿಕಾರ್ಜುನ ಪಾಟೀಲ, ಸುಭಾಷ ಅಲ್ಲಾಪುರ, ಕಲ್ಯಾಣರಾವ್ ಮರಕುಂದ ಕಾಡವಾದ, ಅನಿಲ್ ರೆಡ್ಡಿ ಮುಖ್ಯ ಅತಿಥಿಗಳಾಗಿದ್ದರು.

ತಬಲಾ ವಾದಕ ಜಗನ್ನಾಥ, ಮಾರೂತಿರಾವ್ ಖಾಜಾಪುರ, ಸುನೀಲ್ ಕೆಇಬಿ ಇದ್ದರು. ಜಯಪ್ರದಾ ಕುಲಕರ್ಣಿ ಸ್ವಾಗತಿಸಿದರು. ಗಂಗಮ್ಮ ನಿರೂಪಿಸಿದರು. ಪ್ರದೀಪ ಕುಲಕರ್ಣಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.