ಬುಧವಾರ, ಸೆಪ್ಟೆಂಬರ್ 30, 2020
26 °C

ಏಕತೆಗೆ ಪ್ರಯತ್ನಿಸಿದ್ದ ನಾರಾಯಣಗುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ‘ಬ್ರಹ್ಮರ್ಷಿ ನಾರಾಯಣಗುರು ಅವರು ಸಮಾಜದ ಏಕತೆಗಾಗಿ ಪ್ರಯತ್ನಿಸಿದ್ದರಿಂದ ಲೋಕದಲ್ಲಿ ಅಜರಾಮರರಾಗಿ ಉಳಿದಿದ್ದಾರೆ’ ಎಂದು ಆರ್ಯ ಈಡಿಗ ಸಮಾಜದ ಮುಖಂಡ ಅರವಿಂದ ಮುತ್ತೆ ಅಭಿಪ್ರಾಯಪಟ್ಟರು.

ಇಲ್ಲಿ ಆರ್ಯ ಈಡಿಗ ಸಮಾಜ ಬಳಗ ಈಚೆಗೆ ಆಯೋಜಿಸಿದ್ದ ಬ್ರಹ್ಮರ್ಷಿ ನಾರಾಯಣಗುರು ಅವರ 166 ನೇ ಜಯಂತಿಯಲ್ಲಿ ಭಾವಚಿತ್ರದ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಅವರು ಮೂಢನಂಬಿಕೆ ಹೊಗಲಾಡಿಸಲು ಯತ್ನಿಸಿದ್ದರು. ಮಕ್ಕಳಿಗೆ ಶಿಕ್ಷಣ ನೀಡಿ ಪ್ರಗತಿ ಪಥದಲ್ಲಿ ಸಾಗಲು ಸಲಹೆ ನೀಡಿದ್ದರು. ಅವರ ತತ್ವದ ಪಾಲನೆ ಆಗಲಿ’ ಎಂದರು.

ಸಮಾಜ ಬಳಗದ ಕಾರ್ಯದರ್ಶಿ ಸತೀಶ ತೆಲಂಗ್, ದಿಲೀಪ ಗೌಡ, ರಾಜೀವ ತೆಲಂಗ್, ಧೀರಜ್ ಭೂರಾಳೆ, ಪವನ ಮುತ್ತೆ, ಪ್ರದೀಪ ತೆಲಂಗ್, ಸನಿ ತೆಲಂಗ್, ಆಕಾಶ ತೆಲಂಗ್, ಅಭಿಜೀತ್ ಮುತ್ತೆ, ಬಾಲಾಜಿ ಮುತ್ತೆ ಹಾಗೂ ದೀಪಕ ತೆಲಂಗ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು