ಸೋಮವಾರ, ಆಗಸ್ಟ್ 2, 2021
23 °C

ಬೀದರ್ ನಗರಸಭೆ ಚುನಾವಣೆ: ಕಾಂಗ್ರೆಸ್‍ಗೆ 15 ಸ್ಥಾನ, ಯಾವ ಪಕ್ಷಕ್ಕೂ ಸಿಗದ ಬಹುಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಬೀದರ್ ನಗರಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರಕಿಲ್ಲ. 15 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 

ಬಿಜೆಪಿ 8, ಜೆಡಿಎಸ್ 7, ಎಐಎಂಐಎಂ 2 ಹಾಗೂ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಒಂದು ಸ್ಥಾನ ಗೆದ್ದಿವೆ.

ಬೀದರ್ ನಗರಸಭೆಯಲ್ಲಿ ಒಟ್ಟು 35 ವಾರ್ಡ್ಗಳಿವೆ. ನ್ಯಾಯಾಲಯದಲ್ಲಿ ಪ್ರಕರಣವಿರುವ ಕಾರಣ ವಾರ್ಡ್ ಸಂಖ್ಯೆ 26 ಹಾಗೂ 32 ರ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿಲ್ಲ. ವಾರ್ಡ್ ಸಂಖ್ಯೆ 28ರ ಸದಸ್ಯ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ಹೀಗಾಗಿ, ಉಳಿದ 32 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿತ್ತು.

ವಾರ್ಡ್ ವಾರು ವಿಜೇತರ ವಿವರ:
ವಾರ್ಡ್ ಸಂಖ್ಯೆ 1: ಅಬ್ದುಲ್ ಅಜೀಜ್ -ಎಐಎಂಐಎಂ (1,187 ಮತಗಳು), ವಾರ್ಡ್ ಸಂಖ್ಯೆ 2: ಮೈಮುನಾ ಬೇಗಂ- ಕಾಂಗ್ರೆಸ್ (802 ಮತಗಳು) ವಾರ್ಡ್ ಸಂಖ್ಯೆ 3: ಚೇತನ್ ಮೋಹನ- ಕಾಂಗ್ರೆಸ್ (1,192 ಮತಗಳು), ವಾರ್ಡ್ ಸಂಖ್ಯೆ 4: ಮೊಹಮ್ಮದ್ ರುಯಾಜೊದ್ದಿನ್- ಕಾಂಗ್ರೆಸ್ (1,310 ಮತಗಳು), ವಾರ್ಡ್ ಸಂಖ್ಯೆ 5: ಸೈಯದ್ ಸೌದ್-ಜೆಡಿಎಸ್ (810 ಮತಗಳು), ವಾರ್ಡ್ ಸಂಖ್ಯೆ 6: ಮುಬಿನ್ ಬೇಗಂ- ಕಾಂಗ್ರೆಸ್ (1,084), ವಾರ್ಡ್ ಸಂಖ್ಯೆ 7: ಅಮಿರುನ್ನಿಸಾ ಬೇಗಂ-ಕಾಂಗ್ರೆಸ್ (1,622 ಮತಗಳು), ವಾರ್ಡ್ ಸಂಖ್ಯೆ 8: ಅನೀಸ್ ಸುಲ್ತಾನಾ-ಕಾಂಗ್ರೆಸ್ (841 ಮತಗಳು), ವಾರ್ಡ್ ಸಂಖ್ಯೆ 9: ಬದರುನ್ನಿಸಾ ಬೇಗಂ- ಜೆಡಿಎಸ್ (1,044), ವಾರ್ಡ್ ಸಂಖ್ಯೆ 10: ಅನಿಲಕುಮಾರ ಘಾಳೆಪ್ಪ- ಎಐಎಂಐಎಂ (2,000), ವಾರ್ಡ್ ಸಂಖ್ಯೆ 11: ದ್ರೌಪದಿ ತಿಪ್ಪಣ್ಣ ಕಾಳೆ -ಜೆಡಿಎಸ್ (901 ಮತಗಳು), ವಾರ್ಡ್ ಸಂಖ್ಯೆ 12: ಮಹ್ಮಮದ್ ಗೌಸ್- ಕಾಂಗ್ರೆಸ್ (1,114), ವಾರ್ಡ್ ಸಂಖ್ಯೆ 13: ಪ್ರಶಾಂತ ದಶರಥ ದೊಡ್ಡಿ -ಕಾಂಗ್ರೆಸ್ (1,094 ಮತಗಳು), ವಾರ್ಡ್ ಸಂಖ್ಯೆ 14: ರಾಜು ಚಿಂತಾಮಣಿ-ಜೆಡಿಎಸ್ (753 ಮತಗಳು), ವಾರ್ಡ್ ಸಂಖ್ಯೆ 15: ಮಹಾದೇವಿ ಬಸವರಾಜ ಹುಮನಾಬಾದೆ- ಬಿಜೆಪಿ (1,310 ಮತಗಳು) , ವಾರ್ಡ್ ಸಂಖ್ಯೆ 16: ವೀರಶೆಟ್ಟಿ ಗುರಪ್ಪ- ಬಿಜೆಪಿ (1,293), ವಾರ್ಡ್ ಸಂಖ್ಯೆ 17: ಚಂದ್ರಶೇಖರ ಅಣ್ಣೆಪ್ಪ ಪಾಟೀಲ -ಬಿಜೆಪಿ (1,061 ಮತಗಳು), ವಾರ್ಡ್ ಸಂಖ್ಯೆ 18: ಉಲ್ಲಾಸಿನಿ ವಿಕ್ರಮ ಮುದಾಳೆ -ಬಿಜೆಪಿ (1,183), ವಾರ್ಡ್ ಸಂಖ್ಯೆ 19: ಸೌದರ್ ರಹೆಮಾನ್ ಎಂ.ಡಿ. ಇಸ್ಮಾಯಿಲ್-ಕಾಂಗ್ರೆಸ್ (997 ಮತಗಳು), ವಾರ್ಡ್ ಸಂಖ್ಯೆ 20: ದಿಗಂಬರ ವೈಜಿನಾಥರಾವ್ -ಕಾಂಗ್ರೆಸ್ (1,170 ಮತಗಳು), ವಾರ್ಡ್ ಸಂಖ್ಯೆ 21: ಸಂತೋಷಕುಮಾರಿ ಅರುಣಕುಮಾರ- ಜೆಡಿಎಸ್ (1,091 ಮತಗಳು), ವಾರ್ಡ್ ಸಂಖ್ಯೆ 22: ಪ್ರೀತಿ ರಾಜೇಶ್-ಬಿಜೆಪಿ (1,180 ಮತಗಳು), ವಾರ್ಡ್ ಸಂಖ್ಯೆ 23: ಇಂದುಮತಿ ವೈಜಿನಾಥ -ಜೆಡಿಎಸ್ (1,677 ಮತಗಳು), ವಾರ್ಡ್ ಸಂಖ್ಯೆ 24: ಅಬ್ದುಲ್ ನವೀದ್ ವಹೀದ್- ಕಾಂಗ್ರೆಸ್ (1,349 ಮತಗಳು), ವಾರ್ಡ್ ಸಂಖ್ಯೆ 25: ಶಶಿಧರ ವಿಶ್ವನಾಥ -ಬಿಜೆಪಿ (1,591 ಮತಗಳು), ವಾರ್ಡ್ ಸಂಖ್ಯೆ 27: ಶಿವಕುಮಾರ ಶರಣಪ್ಪ -ಜೆಡಿಎಸ್ (881 ಮತಗಳು),
ವಾರ್ಡ್ ಸಂಖ್ಯೆ 28: ರಾಜಾರಾಮ ಚಿಟ್ಟಾ -ಬಿಜೆಪಿ (ಅವಿರೋಧ ಆಯ್ಕೆ),
 ವಾರ್ಡ್ ಸಂಖ್ಯೆ 29: ಪ್ರಭುಶೆಟ್ಟಿ ಮಾಣಿಕಪ್ಪ -ಬಿಜೆಪಿ (1,529), ವಾರ್ಡ್ ಸಂಖ್ಯೆ 30: ಲಕ್ಷ್ಮೀಬಾಯಿ ಶಂಕರೆಪ್ಪ- ಕಾಂಗ್ರೆಸ್ (1,130 ಮತಗಳು), ವಾರ್ಡ್ ಸಂಖ್ಯೆ 31: ಹಣಮಂತ ಘೋದೆ- ಕಾಂಗ್ರೆಸ್ (1,323 ಮತಗಳು), ವಾರ್ಡ್ ಸಂಖ್ಯೆ 33: ಶಬನಮ್ ಜಬೀನ್- ಎಎಪಿ (1,089 ಮತಗಳು), ವಾರ್ಡ್ ಸಂಖ್ಯೆ 34: ಸುರೇಖಾ - ಕಾಂಗ್ರೆಸ್ (1,011 ಮತಗಳು), ವಾರ್ಡ್ ಸಂಖ್ಯೆ 35: ಸೈಮನ್ ಜಾಶ್ವಾ- ಕಾಂಗ್ರೆಸ್ (839 ಮತಗಳು).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು